ಪೀಸ್ ಟಿವಿ ನಿಷೇಧ ಕುರಿತು ಝಾಕಿರ್‌ ನಾಯ್ಕ್ ಆರೋಪ ತಪ್ಪು: ಸಚಿವ ವೆಂಕಯ್ಯ ನಾಯ್ಡು

Update: 2016-07-16 07:05 GMT

ಹೊಸದಿಲ್ಲಿ,ಜುಲೈ 16: ಇಸ್ಲಾಮೀ ಚ್ಯಾನೆಲ್ ಎಂಬ ಕಾರಣದಿಂದ ಪೀಸ್ ಟಿವಿ ಚ್ಯಾನೆಲ್ ಪ್ರಸಾರವನ್ನು ನಿಷೇಧಿಸಲಾಗಿದೆ ಎಂದು ಇಸ್ಲಾಮೀ ವಿದ್ವಾಂಸ ಝಾಕಿರ್ ನಾಯ್ಕ್ ಮಾಡಿರುವ ಆರೋಪ ತಪ್ಪಾಗಿದೆ ಎಂದು ಕೇಂದ್ರಸರಕಾರ ಸ್ಪಷ್ಟಪಡಿಸಿದೆ. ದೇಶದಲ್ಲಿ ಅಂತಹದೊಂದು ಭೇದಭಾವವೇ ಅಸ್ಥಿತ್ವದಲ್ಲಿಲ್ಲ ಮತ್ತು ಭವಿಷ್ಯದಲ್ಲಿ ಉಂಟಾಗದು ಎಂದು ವಾರ್ತಾಪ್ರಸಾರ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆಂದು ವರದಿಯಾಗಿದೆ. ಝಾಕಿರ್ ನಾಯ್ಕ್ ರ ಇಸ್ಲಾಮಿಕ್ ಫೌಂಡೇಶನ್ ಮಾಲಕತ್ವದ ಪೀಸ್ ಟಿವಿ ಪ್ರಸಾರ ನಿಬಂಧನೆಗಳನ್ನು ಪಾಲಿಸದ್ದರಿಂದ ನಿಷೇಧ ಹೇರಲಾಗಿದೆ ಎಂದು ಅವರು ಹೇಳಿದ್ದಾರೆಂದು ವರದಿ ತಿಳಿಸಿದೆ.

  ಪೀಸ್ ಟಿವಿ ಪ್ರಸಾರ ಕುರಿತು 2008ರಲ್ಲಿ ಪರವಾನಿಗೆಗೆ ಅರ್ಜಿ ಸಲ್ಲಿಸಲಾಗಿತ್ತು. ಅದರ ಬಗ್ಗೆ ಅಧ್ಯಯನ ನಡೆಸಿ ಗ್ರಹಸಚಿವಾಲಯ ಚ್ಯಾನೆಲ್‌ನ ಪ್ರಸಾರಕ್ಕೆ ಅನುಮತಿ ನಿರಕಾರಿಸಿತು. 2009ರಲ್ಲಿ ಪುನಃ ಅರ್ಜಿಸಲ್ಲಿಸಿದಾಗ ಟಿವಿ ಚ್ಯಾನೆಲ್‌ನ ನಿರ್ದೇಶಕರಿಂದ, ಧನಸಹಾಯ ಮುಂತಾದುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೇಳಲಾಯಿತು. ಆದರೆ ಅವುಗಳು ಸಮರ್ಪಿಸಲಾಗಿಲ್ಲ. ಆದ್ದರಿಂದ ಅನುಮತಿ ನಿರಾಕರಿಸಲಾಗಿದೆ ಎಂದು ವೆಂಕಯ್ಯನಾಯ್ಡು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News