ಕೇರಳದಲ್ಲಿ ಅಬಕಾರಿ ದಾಳಿ: ವಲಸೆಕಾರ್ಮಿಕರ ಕ್ಯಾಂಪ್‌ಗಳಲ್ಲಿ ಗಾಂಜಾ, ಬ್ರೌನ್‌ಶುಗರ್ ಪತ್ತೆ, 12 ಮಂದಿ ಬಂಧನ

Update: 2016-07-17 06:20 GMT

 ಕೊಚ್ಚಿ,ಜುಲೈ 17: ಎರ್ನಾಕುಲಂ ಜಿಲ್ಲೆಯ ಹೊರರಾಜ್ಯದ ವಲಸೆ ಕಾರ್ಮಿಕರ ಕ್ಯಾಂಪ್‌ಗಳಿಗೆ ಕೇರಳ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು 12 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಕ್ಯಾಂಪ್‌ಗಳಿಂದ ಗಾಂಜಾ, ಬ್ರೌನ್ ಶುಗರ್‌ನ್ನು ವಶಪಡಿಸಿಕೊಳ್ಳಲಾಗಿದ್ದು ಸಮೀಪದ ಅಂಗಡಿಗಳಿಗೂ ದಾಳಿ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಪೆರುಂಬಾವೂರ್‌ನ ವಿವಿಧ ವಲಸೆಕಾರ್ಮಿಕರ ಕ್ಯಾಂಪ್‌ಗಳಲ್ಲಿ ಅಬಕಾರಿ ಕಮಿಶನರ್ ಋಷಿರಾಜ್ ಸಿಂಗ್‌ರ ನೇತೃತ್ವದಲ್ಲಿ ತಪಾಸಣೆ ಕಾರ್ಯ ಮುಂದುವರಿದಿದ್ದು 22 ತಂಡಗಳನ್ನು ಬೆಳಗ್ಗೆಯ ಆರುಗಂಟೆಯ ವೇಳೆಗೆ ತಪಾಸಣೆ ಆರಂಭಿಸಲಾಯಿತೆನ್ನಲಾಗಿದೆ. ಹೊರರಾಜ್ಯದ ಕಾರ್ಮಿಕರಲ್ಲಿ ಮಾದಕವಸ್ತು ಬಳಕೆ ಮಿತಿಮೀರುತ್ತಿದೆ ಎಂದು ಗುಪ್ತಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ದಾಳಿಯನ್ನು ಆಯೋಜಿಸಲಾಯಿತೆಂದು ಅಬಕಾರಿ ಅಧಿಕಾರಿಗಳು ತಿಳಿಸಿದರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News