ಪಿಎಫ್ಐ ರ್ಯಾಲಿಯಲ್ಲಿ ರಾಷ್ಟ್ರವಿರೋಧಿ ಘೋಷಣೆ: ಸುಳ್ಳು ಪ್ರಚಾರ

Update: 2016-07-17 10:33 GMT

ಹೊಸದಿಲ್ಲಿ, ಜು.17 : ಬಿಹಾರ ರಾಜಧಾನಿ ಪಟ್ನಾದಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರತಿಭಟನಾ ರ್ಯಾಲಿಯಲ್ಲಿ, "ಪಾಕಿಸ್ತಾನ್ ಜಿಂದಾಬಾದ್" ಎಂಬ ಘೋಷಣೆ ಕೂಗಲಾಗಿದೆ ಎಂಬ ಮಾಧ್ಯಮ ವರದಿಗಳು ಶುದ್ಧ ಸುಳ್ಳು ಎಂದು ಪಿಎಫ್ಐ ಪ್ರಧಾನ ಕಾರ್ಯದರ್ಶಿ ಎಂ.ಮಹಮ್ಮದ್ ಅಲಿ ಜಿನ್ನಾ ಹೇಳಿದ್ದಾರೆ.

ಡಾ.ಝಾಕೀರ್ ನಾಯ್ಕ್ ಹಾಗೂ ಅಸಾದುದ್ದೀನ್ ಉವೈಸಿ ಅವರನ್ನು ಗುರಿ ಮಾಡಿರುವುದು, ಅವರ ಧ್ವನಿ ಅಡಗಿಸುವ ಫ್ಯಾಸಿಸ್ಟ್ ಕಾರ್ಯಸೂಚಿಯ ಅಂಗ. ಇದನ್ನು ಖಂಡಿಸಿ ಪಿಎಫ್ಐ ದೇಶದ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯ ಮೂಲ ವೀಡಿಯೊವನ್ನು ತಿರುಚಿ ಇಂತಹ ವಿಷಕಾರಿ ಶಕ್ತಿಗಳು ಮಾಧ್ಯಮ ಮೂಲಕ ದುರ್ಬಳಕೆ ಮಾಡಿಕೊಂಡಿವೆ. ಇದು ಪಿಎಫ್ಐ ಹಾಗೂ ಮುಸ್ಲಿಮ್ ಸಮುದಾಯವನ್ನು ಹತ್ತಿಕ್ಕುವ ಹುನ್ನಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಪಾಟ್ನಾ ರ್ಯಾಲಿಯಲ್ಲಿ ದೇಶವಿರೋಧಿ ಘೋಷಣೆ ಕೂಗಿಲ್ಲ. ಇಂತಹ ಆಪಾದನೆ ನಮ್ಮ ಯಾವ ರ್ಯಾಲಿಗಳಲ್ಲೂ ಬಂದಿಲ್ಲ.  ಸುದ್ದಿ ಪ್ರಕಟಿಸಿದ ಹಾಗೂ ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅಲ್ಪಸಂಖ್ಯಾತ ವಿರೋಧಿ ಶಕ್ತಿಗಳ ಯಾವುದೇ ಒತ್ತಡಗಳಿಗೆ ಮಣಿಯದಂತೆ ರಾಜ್ಯದ ಆಡಳಿತ ಹಾಗೂ ಪೋಲಿಸರಿಗೆ ಮನವಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಡಾ.ನಾಯ್ಕ್ ಹಾಗೂ ಉವೈಸಿ ಅವರನ್ನು ಗುರಿ ಮಾಡಿರುವ ಕೋಮು ಶಕ್ತಿಗಳು ಪಿಎಫ್ಐ ವಿರುದ್ಧವೂ ಸಂಚು ರೂಪಿಸುತ್ತಿದ್ದು, ಮುಸ್ಲಿಮರ ನ್ಯಾಯ ಹಾಗೂ ಶಾಂತಿ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡುತ್ತಿವೆ. ಆದರೆ ಪಿಎಫ್ಐ ಸಮೂಹ ಚಳವಳಿಯಾಗಿದ್ದು, ಇಂತಹ ಶಕ್ತಿಗಳಿಂದ ಅದನ್ನು ತಡೆಯಲಾಗದು ಎಂದು ಹೇಳಿದರು.

ಮೂಲ ವೀಡಿಯೊದಲ್ಲಿ ಪಾಪ್ಯುಲರ್ ಫ್ರಂಟ್ ಜಿಂದಾಬಾದ್ ಎಂದು ಹೇಳುತ್ತಿದ್ದಾರೆಯೇ ವಿನಃ ಟಿವಿ ಚಾನಲ್ ಗಳಲ್ಲಿ ಪ್ರಸಾರವದಂತೆ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News