ರಸ್ತೆ ಅಪಘಾತ: ಸೌದಿಯಲ್ಲಿ ಭಾರತೀಯ ಮಹಿಳೆ, ಮಗ ಮೃತ್ಯು

Update: 2016-07-18 04:47 GMT

ಜಿದ್ದ, ಯಾಬು,ಜುಲೈ 18: ಜಿದ್ದ-ಯಾಬು ಹೈವೆಯಲ್ಲಿ ರಾಬಿಗಿ ಬಳಿ ಕೇರಳದ ಕುಟುಂಬವೊಂದು ಸಂಚರಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಮಹಿಳೆ ಮತ್ತು ಅವರ ಪುತ್ರ ಮೃತರಾಗಿದ್ದು ಮಹಿಳೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಗಾಯಗೊಂಡವರನ್ನು ಅಫ್ಝಲ್ ಎಂದು ಗುರತಿಸಲಾಗಿದ್ದು ಇವರ ಪತ್ನಿ ಸಫೀರಾ(30) ಹಾಗೂ ಪುತ್ರ ಮುಹಮ್ಮದ್ ಅಮಾನ್(8) ಮೃತರಾದ ದುರ್ದೈವಿಗಳೆಂದು ತಿಳಿದು ಬಂದಿದೆ.

  ಮೃತ ಸಫೀರಾ, ಯಾಬು ಅಲ್‌ಮನಾರ್ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೆನ್ನಲಾಗಿದ್ದು ರವಿವಾರ ಬೆಳ್ಳಂಬೆಳಗ್ಗೆ ಐದೂವರೆಗಂಟೆಗೆ ಅಪಘಾತ ಸಂಭವಿಸಿತ್ತು. ಯಾಬುವಿನಲ್ಲಿ ತರಕಾರಿ ವ್ಯಾಪಾರಿಯಾಗಿದ್ದ ಅಫ್ಝಲ್ ಚಲಾಯಿಸುತ್ತಿದ್ದ ಪಿಕ್‌ಅಪ್ ವ್ಯಾನ್ ರಾಬಿಗಿ ಬಳಿ ಟ್ರಯ್ಲರ್‌ಗೆ ಢಿಕ್ಕಿಯಾಗಿದ್ದು ಸಫೀರಾ ಘಟನಾ ಸ್ಥಳದಲ್ಲೇ ಮೃತರಾಗಿದ್ದರು, ಮಗು ಮುಹಮ್ಮದ್ ಅಮಾನ್‌ನ್ನು ರಾಬಿಗ್ ಆಸ್ಪತ್ರೆಗೆ ಸೇರಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಮೃತನಾದ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News