ವಿವಾದದಲ್ಲಿ ನಟ ಇಕ್ಬಾಲ್ ಖಾನ್ ಫೇಸ್ ಬುಕ್ ಪೋಸ್ಟ್

Update: 2016-07-18 13:11 GMT

ಮುಂಬೈ, ಜು.18 : ಇತ್ತೀಚಿಗೆ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿಗೆ ೪೦ಕ್ಕೂ ಹೆಚ್ಚು ಮಂದಿ ಬಲಿಯಾಗಿರುವ ಹಾಗೂ  ' ಪೆಲೆಟ್ ಗನ್ ' ಬಳಕೆ ಮೂಲಕ ಹಲವರು ದೃಷ್ಟಿ ಕಳೆದುಕೊಂಡಿರುವ ಬಗ್ಗೆ ಟಿವಿ ನಟ ಇಕ್ಬಾಲ್ ಖಾನ್ ಅವರ ಫೇಸ್ ಬುಕ್ ಪೋಸ್ಟ್ ವಿವಾದಕ್ಕೊಳಗಾಗಿದೆ. " ಕಾಶ್ಮೀರದ ದೃಶ್ಯಗಳು ಫೆಲೆಸ್ತೀನ್ ದೃಶ್ಯಗಳನ್ನು ಹೋಲುತ್ತವೆ " ಎಂದು ಇಕ್ಬಾಲ್ ಖಾನ್ ತನ್ನ ಫೇಸ್ ಬುಕ್ ನಲ್ಲಿ ಬರೆದಿದ್ದರು. 
" ಜಾಟರು ಕೋಟ್ಯಂತರ ರೂಪಾಯಿ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡಿದ್ದರೂ ಅವರ ವಿರುದ್ಧ ಹೀಗೆ ಮಾಡಿರಲಿಲ್ಲ. ಕಾಶ್ಮೀರದ ಪರಿಸ್ಥಿತಿಯನ್ನು ಇನ್ನಷ್ಟು ಚೆನ್ನಾಗಿ ನಿರ್ವಹಿಸಿ. ಪ್ರತಿಭಟನಾಕಾರರನ್ನು ಕುರುಡರಾಗಿಸುವುದು ಹಾಗೂ ಅವರನ್ನು ಕೊಳ್ಳುವುದು ಸರಿಯಲ್ಲ " ಎಂದು ಹೇಳಿರುವ ಇಕ್ಬಾಲ್  ಎಂದು  ಭಾರತ ಸರಕಾರವನ್ನು ವಿನಂತಿಸಿದ್ದಾರೆ. 

ಅವರ ಪೋಸ್ಟ್ ಇಲ್ಲಿದೆ : 


 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News