ಸಮಾಜದಿಂದ ಓಡಿಹೋಗುವುದು ಇಸ್ಲಾಂ ಧರ್ಮ ಅಲ್ಲ: ಸಾದಿಕಲಿ ಶಿಹಾಬ್ ತಂಙಳ್

Update: 2016-07-19 09:42 GMT

  ಕೋಝಿಕ್ಕೋಡ್, ಜುಲೈ 19: ಸಮಾಜದಿಂದ ಓಡಿಹೋಗುವುದು ಇಸ್ಲಾಮ್ ಧರ್ಮವಲ್ಲ ಎಂದು ಪಾಣಕ್ಕಾಡ್ ಸಾದಿಕಲಿ ಶಿಹಾಬ್ ತಂಙಳ್ ಹೇಳಿದ್ದಾರೆಂದು ವರದಿಯಾಗಿದೆ.ಕೋಝಿಕ್ಕೋಡ್ ಚೇಂಬರ್ ಹಾಲ್‌ನಲ್ಲಿ " ಕಾಣೆಯಾದ ಯುವಕರು,ಕೇರಳದ ಆತಂಕ" ಎಂಬ ಚರ್ಚಾಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಇಸ್ಲಾಮ್ ಸಮಾಜದಲ್ಲಿ ಉಳಿದು ಕೆಲಸಮಾಡಲು ಜನರಿಗೆ ಹೇಳುತ್ತದೆ. ತೀವ್ರ ಆಧ್ಯಾತ್ಮಿಕತೆಯನ್ನು ಜನರು ವಿರೋಧಿಸಬೇಕು. ಸಂದೇಹದ ಬಿತ್ತನೆನಡೆಸಿ ಕೇರಳದಲ್ಲಿ ಭಯವನ್ನು ಸೃಷ್ಟಿಸುವ ಯತ್ನವನ್ನು ಜನರು ಅರಿಯಬೇಕು. ಜಗತ್ತಿನಾದ್ಯಂತ ಇಸ್ಲಾಮೋಫೋಬಿಯವನ್ನು ಬಹು ದೊಡ್ಡ ಪ್ರಮಾಣದಲ್ಲಿ ಪ್ರಚಾರ ನಡೆಸಲಾಗುತ್ತಿದೆ.ಇದರ ಹಿಂದೆ ಸಾಮ್ರಾಜ್ಯಶಾಹಿ ಶಕ್ತಿಗಳ ಬುದ್ಧಿ ಕೆಲಸಮಾಡುತ್ತಿವೆ. ಅವು ಧರ್ಮದ ಉತ್ತಮ ಅಂಶಗಳನ್ನು ಮರೆಸಿಟ್ಟು ಭಯೋತ್ಪಾದಕ ಧರ್ಮ ಎಂದು ಚಿತ್ರಿಸಲಾಗುತ್ತಿದೆ. ಭಾರತದ ಬಲಿಷ್ಠ ಪ್ರಜಾಪ್ರಭುತ್ವವನ್ನು ಇಲ್ಲವಾಗಿಸಲು ಕೆಲವು ಕಾರ್ಪೊರೇಟ್ ಅಜೆಂಡಾಗಳು ಜಾರಿಯಲ್ಲಿವೆ. ಅಂತಾರಾಷ್ಟ್ರೀಯ ಕಾರ್ಪೊರೇಟ್ ಸಮೂಹದ ಬಿಗಿಮುಷ್ಟಿಯಲ್ಲಿ ಜಗತ್ತು ಚಡಪಡಿಸುತ್ತಿದೆ. ಅದಕ್ಕೆ ತೀವ್ರತೆಯನ್ನು ಕೊಡಲುಇಸ್ಲಾಮೋಫೋಬಿಯವನ್ನು ಬೆಳಸಲಾಗುತ್ತಿದೆ. ತೀವ್ರ ಆಧ್ಯಾತ್ಮಿಕತೆಗೆ ಅಲೆದಾಡುತ್ತಿರುವವರನ್ನು ಐಸಿಸ್ ಆಹುತಿ ಪಡೆಯುತ್ತಿರುವ ಸುದ್ದಿ ಬಹಳ ಗಂಭೀರವಾದುದು.ಆಧ್ಯಾತ್ಮಿಕ ಭಯೋತ್ಪಾದನೆಯ ಹೆಸರಲ್ಲಿ ದೇಶಕ್ಕೆ ವಿದ್ಯಾವಂತರು ನಷ್ಟವಾಗುತ್ತಿರುವುದು ಖೇದಕರ. ಧರ್ಮವನ್ನು ಪಲಾಯನ ಎಂಬ ರೀತಿಯಲ್ಲಿ ಪ್ರಚಾರ ನಡೆಸುವುದು ತಪ್ಪೆಂದು ಸಾದಿಕಲಿ ಶಿಹಾಬ್ ತಂಙಳ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News