ಶೀನಾ ಹತ್ಯೆ ಸಂಚಿನಲ್ಲಿ ಪೀಟರ್ ಕೂಡಾ ಭಾಗಿ

Update: 2016-07-19 16:59 GMT

ಮುಂಬೈ,ಜು.19: ಶೀನಾ ಬೋರಾಳನ್ನು ಕೊಲೆಗೈಯಲು ಆಕೆಯ ತಾಯಿ ಇಂದ್ರಾಣಿ ಮುಖರ್ಜಿಯಾ ಹಾಗೂ ಪೀಟರ್ ಮುಖರ್ಜಿ ಜೊತೆಯಾಗಿ ಸಂಚು ರೂಪಿಸಿದ್ದರೆಂದು ಸಿಬಿಐ ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ. ಪೀಟರ್ ಮುಖರ್ಜಿಯಾನ ಪುತ್ರ ರಾಹುಲ್ ಹಾಗೂ ಶೀನಾ ಪರಸ್ಪರ ಪ್ರೀತಿಸುತ್ತಿರುವುದು ಇವರಿಬ್ಬರಿಗೂ ಅಸಮಾಧಾನವುಂಟು ಮಾಡಿತ್ತೆಂದು ಅದು ಆಪಾದಿಸಿದೆ.

ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜಾಮೀನು ಬಿಡುಗಡೆ ಕೋರಿ ಪೀಟರ್ ಮುಖರ್ಜಿಯಾ ಸಲ್ಲಿಸಿದ ಅರ್ಜಿಯನ್ನು ವಿರೋಧಿಸಿ ಸಲ್ಲಿಸಿದ ಅಫಿದಾವಿತ್‌ನಲ್ಲಿ ಸಿಬಿಐ ಹೇಳಿದೆ.
ಪ್ರಕರಣದ ವಿಚಾರಣೆಯು ಈಗ ನಿರ್ಣಾಯಕ ಹಂತದಲ್ಲಿದ್ದು, ಜಾಮೀನಿನಲ್ಲಿ ಪೀಟರ್‌ನನ್ನು ಬಿಡುಗಡೆಗೊಳಿಸಿದಲ್ಲಿ ತನಿಖೆಗೆ ಅಡ್ಡಿಯಾಗಲಿದೆಯೆಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

‘‘ಪೀಟರ್ ಮುಖರ್ಜಿಯಾ ಶಾಂತಚಿತ್ತನಾಗಿದ್ದುಕೊಂಡೇ ಅತ್ಯಂತ ವ್ಯವಸ್ಥಿತವಾಗಿ ಹೇಯ ಅಪರಾಧವೊಂದನ್ನು ಎಸಗಲು, ಇತರ ಆರೋಪಿಗಳ ಜೊತೆ ಕ್ರಿಮಿನಲ್‌ಸಂಚು ನಡೆಸಿದ್ದ. ಶೀನಾ ಹಾಗೂ ರಾಹುಲ್ ಮುಖರ್ಜಿಯ ಪ್ರೇಮಸಂಬಂಧದ ಬಗ್ಗೆ ಇಂದ್ರಾಣಿ ಹಾಗೂ ರಾಹುಲ್ ಇಬ್ಬರೂ ಅಸಂತುಷ್ಟರಾಗಿದ್ದರು’’ ಸಿಬಿಐ ಅಫಿದಾವಿತ್‌ನಲ್ಲಿ ತಿಳಿಸಿದೆ.
ಪ್ರಕರಣದ ಮುಂದಿನ ಆಲಿಕೆಯನ್ನು ನ್ಯಾಯಮೂರ್ತಿ ದೇಶಮುಖ್ ಅವರು ಜುಲೈ 27ಕ್ಕೆ ನಿಗದಿಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News