ಬುಧವಾರ ಪ್ರಕಟಗೊಂಡ ಫಲಿತಾಂಶ ಗುರುವಾರ ಹಿಂದಕ್ಕೆ!

Update: 2016-07-21 16:54 GMT

ಹೊಸದಿಲ್ಲಿ,ಜು.21: ಬುಧವಾರವಷ್ಟೇ (ಜು.20) ಪ್ರಕಟಗೊಂಡಿದ್ದ ದಿಲ್ಲಿ ಪೊಲೀಸ್ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳ ಮತ್ತು ಸಿಐಎಸ್‌ಎಫ್‌ನಲ್ಲಿ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ಗಳ ಹುದ್ದೆಗಳಿಗಾಗಿ ನಡೆದಿದ್ದ ಪರೀಕ್ಷೆಯ ಪೇಪರ್-1 ಫಲಿತಾಂಶಗಳನ್ನು ಸ್ಟಾಫ್ ಸಿಲೆಕ್ಷನ್ ಕಮಿಷನ್(ಎಸ್‌ಎಸ್‌ಸಿ) ಗುರುವಾರ ಹಿಂದೆಗೆದುಕೊಂಡಿದೆ.

ಸಿಸ್ಟಮ್‌ನಲ್ಲಿಯ ದೋಷದಿಂದಾಗಿ ಕೆಲವು ಅಸಮಂಜಸತೆಗಳು ಕಾಣಿಸಿಕೊಂಡಿರುವುದರಿಂದ ಫಲಿತಾಂಶಗಳನ್ನು ಹಿಂದೆಗೆದುಕೊಳ್ಳಲಾಗುತ್ತಿದೆ ಎಂದು ಎಸ್‌ಎಸ್‌ಸಿ ಅಧಿಸೂಚನೆಯಲ್ಲಿ ತಿಳಿಸಿದೆ. ಸಮಸ್ಯೆಯನ್ನು ಬಗೆಹರಿಸಿದ ಬಳಿಕ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದೂ ಅದು ತಿಳಿಸಿದೆ.
ಜೂನ್ 4,5,6,7ಮತ್ತು 11ರಂದು ನಡೆದಿದ್ದ ಮರುಪರೀಕ್ಷೆಗೆ ಸುಮಾರು 2,40,000 ಅಭ್ಯರ್ಥಿಗಳು ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News