ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಸರಕಾರ ವಿರೋಧಿಸುತ್ತಿಲ್ಲ: ಸುರೇಂದ್ರನ್

Update: 2016-07-21 16:56 GMT

ಹೊಸದಿಲ್ಲಿ, ಜು.21: ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆಂದು ಕೇರಳದ ಎಲ್‌ಡಿಎಫ್ ಸರಕಾರ ಇಂದು ಹೇಳಿದೆ.

ಎಲ್‌ಡಿಎಫ್ ಸರಕಾರವು ತನ್ನ 2007ರ ಅಫಿದಾವಿತ್‌ಗೆ ಬದ್ಧವಾಗಿದೆ. ಅದು ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶಾವಕಾಶ ನೀಡುವ ಪರವಾಗಿದೆಯೆಂದು ಕೇರಳದ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಪತ್ರಕರ್ತರಿಗಿಲ್ಲಿ ತಿಳಿಸಿದರು.
ಎಲ್‌ಡಿಎಫ್ ಸರಕಾರವು 2007ರಲ್ಲಿ ದಾಖಲಿಸಿರುವ ಅಫಿದಾವಿತ್‌ಗೆ ಬದ್ಧವಾಗಿದೆ. ಶಬರಿಮಲೆ ಮೊಕದ್ದಮೆಗೆ ಸಂಬಂಧಿಸಿದ ಕಡತಕ್ಕಾಗಿ ತಾನು ಕೇಳಿದ್ದೇನೆ. ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತಾದ ತಮ್ಮ ನಿಲುವು ಸ್ಪಷ್ಟವಿದೆ. ಆದರೆ, ಯುಡಿಎಫ್ ಸರಕಾರ ಅಧಿಕಾರಕ್ಕೆ ಬಂದಾಗ ಅದು ಸರಕಾರದ ನಿಲುವನ್ನು ಬದಲಿಸಿತ್ತೆಂದು ಅವರು ಹೇಳಿದರು.
ದೇವಾಲಯವೊಂದಕ್ಕೆ ಪ್ರವೇಶದ ವಿಚಾರವು, ಸಂಸ್ಕೃತಿ, ಪರಂಪರೆ ಹಾಗೂ ಎಲ್ಲ ವಿಷಯಗಳ ಬಗ್ಗೆ ನಾಗರಿಕ ಸಮಾಜದೊಂದಿಗೆ ತಾವು ಚರ್ಚೆ ಮಾಡಬೇಕಾದಂತಹ ಸಂಗತಿಯಾಗಿದೆ. ತಾವು ಮಹಿಳಾ ಸಮಾನತೆಯ ಪರವಾಗಿದ್ದೇವೆ. ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ತಾವು ವಿರೋಧಿಸುತ್ತಿಲ್ಲವೆಂದು ಸುರೇಂದ್ರನ್ ತಿಳಿಸಿದರು.
ಕೇರಳದ ಶಬರಿಮಲೆ ದೇವಳದೊಳಗೆ ಮಹಿಳೆಯರ ಪ್ರವೇಶ ನಿಷೇಧವನ್ನು ಫೆ.12ರಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ದೇವರು ಮಹಿಳೆಯರು ಹಾಗೂ ಪುರುಷರ ನಡುವೆ ತಾರತಮ್ಯ ಮಾಡುವುದಿಲ್ಲವಾದರೂ ಮನುಷ್ಯ ನಿರ್ಮಿತ ಪದ್ಧತಿ ಅಂತಹ ನಿಷೇಧ ಹೇರಲು ಸಾಧ್ಯವೆಂದು ಅದು ಹೇಳಿತ್ತು.
2008ರಲ್ಲಿ ಆಗಿನ ಎಲ್‌ಡಿಎಫ್ ಸರಕಾರ ಎಲ್ಲ ವಯೋಮಾನದ ಮಹಿಳೆಯರಿಗೂ ಶಬರಿಮಲೆ ದೇಗುಲದೊಳಗೆ ಪ್ರವೇಶವನ್ನು ಬೆಂಬಲಿಸಿ ಅಫಿದಾವಿತ್ ದಾಖಲಿಸಿತ್ತು. ಆದರೆ, 2016ರಲ್ಲಿ ಯುಡಿಎಫ್ ಸರಕಾರವು ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಅಫಿದಾವಿತ್ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News