ಗಾಂಧಿ ಕುಟುಂಬ ಈವರೆಗೆ ಕ್ಷಮೆ ಯಾಚಿಸಿದ ಇತಿಹಾಸವಿಲ್ಲ: ದಿಗ್ವಿಜಯ್ ಸಿಂಗ್

Update: 2016-07-22 11:35 GMT

 ಹೊಸದಿಲ್ಲಿ,ಜುಲೈ 22: ರಾಹುಲ್ ಗಾಂಧಿ ಆರೆಸ್ಸೆಸ್‌ನಿಂದ ಕ್ಷಮೆ ಯಾಚಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದ್ದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ವಿಷಾದ ಸೂಚಿಸಿದ್ದು ಗಾಂಧಿ ಕುಟುಂಬ ಈವರೆಗೆ ಕ್ಷಮೆಯಾಚಿಸಿದ ಇತಿಹಾಸವಿಲ್ಲ ಎಂದಿದ್ದಾರೆ. ಆದ್ದರಿಂದ ರಾಹುಲ್ ಗಾಂಧಿ ಕ್ಷಮೆ ಯಾಚಿಸುವುದಿಲ್ಲ ಬದಲಾಗಿ ವಿಚಾರಣೆ ಎದುರಿಸಲಿದ್ದಾರೆಂದು ದಿಗ್ವಿಜಯ್ ಸಿಂಗ್ ಹೇಳಿರುವುದಾಗಿ ವರದಿಯಾಗಿದೆ. ರಾಹುಲ್ ಗಾಂಧಿ ಭಾಷಣವೊಂದರಲ್ಲಿ ಮಹಾತ್ಮ ಗಾಂಧಿಯನ್ನು ಆರೆಸ್ಸೆಸ್‌ ಹತ್ಯೆ ಮಾಡಿದೆ ಎಂದು ಹೇಳಿದ್ದರು ಎಂದು ಅವರ ವಿರುದ್ಧ ದೂರುದಾಖಲಾಗಿದೆ. ಈಟಿವಿಯ ಜಗದೀಶ್‌ಚಂದ್ರರೊಂದಿಗೆ ಮಾತುಕತೆಯ ವೇಳೆ ದಿಗ್ವಿಜಯ್ ಸಿಂಗ್ ರಾಹುಲ್ ಗಾಂಧಿ ಗೋಡ್ಸೆ ಪ್ರಕರಣದಲ್ಲಿ ಕ್ಷಮೆ ಯಾಚಿಸುವುದಿಲ್ಲ ಬದಲಾಗಿ ವಿಚಾರಣೆ ಎದುರಿಸಲಿದ್ದಾರೆ ಎಂದಿದ್ದಾರೆ ಎಂದು ವರದಿತಿಳಿಸಿದೆ.

 ಆರೆಸ್ಸೆಸ್ ಪ್ರಚಾರಕ್  ಒಬ್ಬರು ಸುದ್ದಿ ಸಂಸ್ಥೆ ಎಎನ್‌ಐಗೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದು "ಸುಪ್ರೀಂ ಕೋರ್ಟ್ ಬಗ್ಗೆ ರಾಹುಲ್‌ಗೆ ಸ್ವಲ್ಪವಾದರೂ ಗೌರವಿದ್ದರೆ ಕ್ಷಮೆ ಯಾಚಿಸಲಾರರು. ಅವರು ಕ್ಷಮೆ ಯಾಚಿಸದಿದ್ದರೆ ಆಗಾಗ ಕೋರ್ಟ್‌ಗೆ ಅಲೆಯಬೇಕಾಗುತ್ತದೆ. ನಾನು ಅವರಿಗೆ ಹೇಳುತ್ತಿದ್ದೇನೆ, ಅವರದೇ ಪಕ್ಷದ ಸೀತಾರಮಣ ಕೇಸರಿ ಆರೆಸ್ಸೆಸ್ ಮಹಾತ್ಮ ಗಾಂಧಿಯ ಹತ್ಯೆಯಲ್ಲಿ ಶಾಮೀಲಾಗಿದ್ದ ಎಂದಿದ್ದರು. ಅವರು ಕೂಡಾ ಕ್ಷಮೆ ಯಾಚಿಸಬೇಕು. ಇನ್ನೊಬ್ಬ ಕಾಂಗ್ರೆಸ್ ನಾಯಕ ಅರ್ಜುನ್ ಸಿಂಗ್ ಇದೇ ವಿಚಾರದಲ್ಲಿ ಕೂಡಾ ಕೋರ್ಟ್‌ಗೆ ಬರಬೇಕಾದೀತು. ಜೊತೆಗೆ ಪ್ರಸಿದ್ಧಬರಹಗಾರ ಎಜಿ ನೂರಾನಿ ಕೂಡಾ ಇದೇ ವಿಚಾರಕ್ಕೆ ಕ್ಷಮೆ ಯಾಚಿಸಬೇಕು" ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.

ರಾಹುಲ್ ಗಾಂಧಿ ತನ್ನ ವಿರುದ್ಧ ಮಹಾರಾಷ್ಟ್ರದ ಕೋರ್ಟೊಂದರಲ್ಲಿ ದಾಖಲಾದ ಮಾನಹಾನಿ ಮೊಕದ್ದಮೆಯನ್ನು ರದ್ದುಗೊಳಿಸಬೇಕೆಂದು ಸುಪ್ರೀಂಕೋರ್ಟ್‌ಗೆ ಅರ್ಜಿಸಲ್ಲಿಸಿದ್ದು ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು.

ಕೋರ್ಟ್ ರಾಹುಲ್ ಗಾಂಧಿಗೆ ನೀವು ಸಾಮೂಹಿಕವಾಗಿ ಟೀಕೆ ಮಾಡುವಂತಿಲ್ಲ. ಈ ಪ್ರಕರಣದಲ್ಲಿ ಒಂದೋ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು.ಇಲ್ಲದಿದ್ದರೆ ಕ್ಷಮೆ ಕೋರಬೇಕು ಎಂದು ಆದೇಶಿಸಿತ್ತು. ಮುಂದಿನ ವಿಚಾರಣೆ ಜುಲೈ 27ಕ್ಕೆ ನಡೆಯಲಿದೆ. ಸುಪ್ರೀಂಕೋರ್ಟ್ ನಾವು ಕೇವಲ ರಾಹುಲ್ ಗಾಂಧಿಯ ಹೇಳಿಕೆ ಮಾನಹಾನಿಕರವಾಗಿದೆಯೇ ಎಂದು ಮಾತ್ರ ಪರಿಶೀಲಿಸಲಿದ್ದೇವೆ ಎಂದು ಹೇಳಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News