ಮಹಿಳೆಗೆ ಕಿರುಕುಳ ಆರೋಪ: ನ್ಯಾಯಾಧೀಶ ಆತ್ಮಹತ್ಯೆಗೆ ಯತ್ನ

Update: 2016-07-22 11:11 GMT

ಹೊಸದಿಲ್ಲಿ,ಜುಲೈ 22: ಮಹಿಳೆಯೊಬ್ಬರಿಂದ ಅತ್ಯಾಚಾರ ಆರೋಪ ಎದುರಿಸುತ್ತಿರುವ ನ್ಯಾಯಾಧೀಶರೊಬ್ಬರು ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಿಲ್ಲಿಯಿಂದ ವರದಿಯಾಗಿದೆ.ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ. ದಿಲ್ಲಿಯ ದ್ವಾರಕಾ ಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾದ ಪಿ.ಎಸ್. ಮಾಲಿಕ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ಮಹಿಳೆಯೊಬ್ಬರು ದೂರು ನೀಡಿದ್ದು ಆನಂತರ ನ್ಯಾಯಾಧೀಶರು ಒತ್ತಡಕ್ಕೊಳಗಾಗಿದ್ದರೆನ್ನಲಾಗಿದೆ.

    ಶುಕ್ರವಾರ ನಿದ್ರೆಯ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಹೆಡ್‌ಗೋವರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ ಎನ್ನಲಾಗಿದೆ. ಮಹಿಳೆಯಿಂದ ಆರೋಪ ಹೊರಿಸಿ ದೂರು ನೀಡಿದ ಬಳಿಕ ದಿಲ್ಲಿ ಹೈಕೋರ್ಟ್ ಅವರನ್ನು ಅಮಾನತು ಗೊಳಿಸಿತ್ತು. ಇದರಿಂದ ಇನ್ನಷ್ಟು ಒತ್ತಡಕ್ಕೊಳಗಾಗಿ ನಿದ್ದೆ ಮಾತ್ರೆಗಳನ್ನು ಪ್ರಮಾಣಕ್ಕಿಂತ ಹೆಚ್ಚು ಸೇವಿಸಿ ಆತ್ಮಹತ್ಯೆಗೆ ಇಂದು ಯತ್ನಿಸಿದ್ದಾರೆ ಸಎಂದುವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News