ಐಆರ್‌ಎಫ್ ಸಿಬ್ಬಂದಿ ಸೆರೆ

Update: 2016-07-22 18:21 GMT

ಮುಂಬೈ, ಜು.22: ಧಾರ್ಮಿಕ ಪ್ರವಚನಕಾರ ಝಾಕಿರ್ ನಾಯ್ಕನ ಪ್ರತಿಷ್ಠಾನದೊಂದಿಗೆ ಸಂಬಂಧವಿದೆಯೆಂದು ಆರೋಪಿಸಲಾಗಿರುವ ಅರ್ಶಿದ್ ಕುರೇಶಿ ಎಂಬವರನ್ನು ಬುಧವಾರ ನವಿ ಮುಂಬೈಯಲ್ಲಿ ಬಂಧಿಸಲಾಗಿದೆ.

ಅರ್ಶಿದ್ ಅವರು ಝಾಕಿರ್ ನಾಯ್ಕನ ಇಸ್ಲಾಮಿಕ್ ರೀಸರ್ಚ್ ಫೌಂಡೇಶನ್‌ನಲ್ಲಿ ಸಾರ್ವಜನಿಕ ಸಂಪರ್ಕಾ ಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದರೆಂದು ಹೇಳಲಾಗಿದೆ. ಅರ್ಶಿದ್‌ಗೆ ಅಲ್ಲಿ ರೂ. 44 ಸಾವಿರ ಸಂಬಳ ದೊರೆಯು ತ್ತಿತ್ತೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಭಯೋತ್ಪಾದಕ ನಿಗ್ರಹ ದಳ(ಎಟಿಎಸ್) ಹಾಗೂ ಕೇರಳ ಪೊಲೀಸ್‌ನ ಜಂಟಿ ಕಾರ್ಯಾಚರಣೆಯೊಂದರಲ್ಲಿ ಬುಧವಾರ ರಾತ್ರಿ ಅರ್ಶಿದ್‌ರನ್ನು ಬಂಧಿಸಲಾಗಿದೆ. ಆತನನ್ನು 4 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಕೊಚ್ಚಿಯಲ್ಲಿ ಜು. 17ರಂದು ಮಹಿಳೆಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗಿದೆ. ಆದರೆ ಪೊಲೀಸರ ಶಂಕೆಯನ್ನು ಸಾರಾಸಗಟಾಗಿ ನಿರಾಕರಿಸಿರುವ ಫೌಂಡೇಶನ್, ನಮ್ಮ ಯಾವುದೇ ಸಿಬ್ಬಂದಿ ಯಾವ ರೀತಿಯಲ್ಲೂ ಉಗ್ರವಾದವನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News