ಎಎನ್-32 ವಿಮಾನ ನಾಪತ್ತೆ: ಐಎಎಫ್ ಅಧಿಕಾರಿಗಳಿಂದ ತಮಿಳುನಾಡು ಪೊಲೀಸರಿಗೆ ದೂರು

Update: 2016-07-24 13:37 GMT

ಚೆನ್ನೈ, ಜು.24: ಭಾರತೀಯ ವಾಯುಸೇನೆಯ ಎಎನ್-32 ವಿಮಾನವು ಕಾಣೆಯಾಗಿರುವ ವಾಯುಪಡೆಯ ಅಧಿಕಾರಿಗಳು ತಮಿಳುನಾಡು ಪೊಲೀಸರಿಗೆ ಔಪಚಾರಿಕ ದೂರೊಂದನ್ನು ದಾಖಲಿಸಿದ್ದಾರೆ. ವಿಮಾನಕ್ಕಾಗಿ 48 ತಾಸುಗಳ ಬಿರುಸಿನ ಶೋಧ ಕಾರ್ಯಾಚರಣೆಯ ಬಳಿಕ ಈ ದೂರನ್ನು ನೀಡಲಾಗಿದೆ. ಐಎಎಫ್‌ನ ಎಎನ್-32 ವಿಮಾನ ಕಾಣೆಯಾಗಿರುವ ಕುರಿತು ದೂರೊಂದು ತಮಗೆ ಬಂದಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.

ಸೆಲೈಯೂರು ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಈ ದೂರು ದಾಖಲಾಗಿದೆಯೆಂದು ಅವರು ಹೇಳಿದ್ದಾರೆ.

ಎಎನ್-32 ವಿಮಾನದಲ್ಲಿ 29 ಮಂದಿ ಸಿಬ್ಬಂದಿಯಿದ್ದರು. ಆ ವಿಮಾನ ಕಾಣೆಯಾಗಿದೆಯೆಂದು ದೂರಿನಲ್ಲಿದೆ. ಕಾಣೆಯಾದ ವಿಮಾನದಲ್ಲಿದ್ದವರಲ್ಲಿ ಒಬ್ಬರು ತಮಿಳುನಾಡಿನವರಾಗಿದ್ದಾರೆಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಇಂತಹ ದೂರನ್ನು ಕಾನೂನು ಉದ್ದೇಶಕ್ಕಾಗಿ ದಾಖಲಿಸಲಾಗುತ್ತದೆ. ಕಳೆದ ವರ್ಷ ತಟ ರಕ್ಷಣಾ ಪಡೆಯ ಡಾರ್ನಿಯರ್ ವಿಮಾನ ಕಾಣೆಯಾಗಿದ್ದಾಗಲೂ ಇಂತಹದೇ ದೂರನ್ನು ನೀಡಲಾಗಿತ್ತು. ಡಾರ್ನಿಯರ್ ವಿಮಾನದ ಅವಶೇಷ ಹಾಗೂ ಅದರ ಸಿಬ್ಬಂದಿಯ ಮೃತದೇಹಗಳು ಬಳಿಕ ತಮಿಳುನಾಡಿನ ಕಡಲೂರು ಸಮುದ್ರದಲ್ಲಿ ಪತ್ತೆಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News