ನೃತ್ಯ ತಂಡ ಸೇರಲು ನಿರಾಕರಿಸಿದ ಯುವತಿಯ ಸಾಮೂಹಿಕ ಅತ್ಯಾಚಾರ

Update: 2016-07-25 09:38 GMT

ಗೋರಕ್‌ಪುರ್, ಜುಲೈ 25: ನೃತ್ಯ ತಂಡವೊಂದನ್ನು ಸೇರಲು ನಿರಾಕರಿಸಿದ 26ವರ್ಷದ ಯುವತಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರ ಗೈದ ಬರ್ಬರ ಘಟನೆ ಉತ್ತರ ಪ್ರದೇಶದ ಕುಶಿ ನಗರದಿಂದ ವರದಿಯಾಗಿದೆ. ಶನಿವಾರದಂದು ಅಕ್ರಮಿಗಳಿಂದ ತಪ್ಪಿಸಿಕೊಂಡು ಬಂದ ಯುವತಿ ಗೋರಕ್‌ಪುರ್‌ನಲ್ಲಿರುವ ತನ್ನ ಗೆಳತಿಯ ಮನೆಯಲ್ಲಿ ರಕ್ಷಣೆ ಪಡೆದಿದ್ದಳೆಂದುವರದಿ ತಿಳಿಸಿದೆ.

ಯುವತಿ ವಾರಣಾಸಿಯಲ್ಲಿ ಕೆಲಸ ಮಾಡುತ್ತಿದ್ದು ರಜೆಯಲ್ಲಿ ಮನೆಗೆ ಬಂದಿದ್ದಳು. ಅವಳಿಗೆ ಪರಿಚಿತಳಾದ ಮಹಿಳೆಯೊಬ್ಬಳು ನೃತ್ಯ ತಂಡವನ್ನು ಸೇರಲು ಆಹ್ವಾನ ನೀಡಿದ್ದಳು. ಇದಕ್ಕೆ ಒಪ್ಪದ ಯುವತಿಯನ್ನು ಆ ಮಹಿಳೆ ಕುಟುಂಬದ ಮದುವೆಯೊಂದಿದೆ ಎಂದು ಸುಳ್ಳು ಹೇಳಿ ಕುಶಿನಗರದ ಮನೆಗೆ ಕರೆತಂದಿದ್ದಳು ಎನ್ನಲಾಗಿದೆ. ಅಲ್ಲಿ ನೃತ್ಯ ಮಾಡಲು ಒಪ್ಪದ ಯುವತಿಯನ್ನು ಅಲ್ಲಿದ್ದ ಐದು ಮಂದಿ ಕ್ರೂರವಾಗಿ ಅತ್ಯಾಚಾರ ವೆಸಗಿದ್ದಾರೆ. ಮಾತ್ರವಲ್ಲ ಆಹಾರ ನೀರು ನೀಡದೆ ರೂಮೊಂದರಲ್ಲಿ ಕೂಡಿ ಹಾಕಿದ್ದಲ್ಲದೆ ಯುವತಿಯ ಖಾಸಗಿ ಅಂಗಗಳಿಗೆ ಸುಟ್ಟಗಾಯ ಮಾಡಿದ್ದಾರೆ ಎಂದು ವರದಿ ವಿವರಿಸಿದೆ.

 ವೈದ್ಯಕೀಯ ಪರೀಕ್ಷೆಯಲ್ಲಿ ಯುವತಿ ಬರ್ಬರ ಅತ್ಯಾಚಾರಕ್ಕೊಳಗಾಗಿರುವುದು ಸಾಬೀತಾಗಿದೆ. ಯುವತಿಯ ತಾಯಿ ದೂರು ನೀಡಿದ್ದು ಗೋರಕ್‌ಪುರ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ ಹಾಗೂ ಆರೋಪಿಗಳಿಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News