ಸ್ವಾಮಿ ಅಗ್ನಿವೇಶ್ ಜೆಡಿಯು ತೆಕ್ಕೆಗೆ

Update: 2016-07-26 10:57 GMT

ಹೊಸದಿಲ್ಲಿ,ಜುಲೈ 26: ಅಣ್ಣಾ ಹಝಾರೆ ತಂಡದ ಪ್ರಮುಖ ಸದಸ್ಯ ಸ್ವಾಮಿ ಅಗ್ನಿವೇಶ್‌ರು ಮತ್ತೊಮ್ಮೆ ಸಕ್ರಿಯ ರಾಜಕೀಯ ಪ್ರವೇಶಿಸಿದ್ದಾರೆಂದು ವರದಿಯಾಗಿದೆ. ನಿತೀಶ್ ಕುಮಾರ್‌ರ ಜೆಡಿಯುಪಕ್ಷಕ್ಕೆ ಸೇರ್ಪಡೆಯಾಗಿದ್ದು ಜೆಡಿಯು ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಕ್‌ರ ಸಮಕ್ಷಮದಲ್ಲಿ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದಿದ್ದಾರೆಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ನಿತೀಶ್‌ಕುಮಾರ್ ಅಗ್ನಿವೇಶ್ ಜೆಡಿಯು ಪಕ್ಷ ಸೇರಿದ್ದನ್ನು ಸ್ವಾಗತಿಸಿದ್ದು ತನ್ನ ಮದ್ಯಪಾನ ನಿರೋಧ ನೀತಿಯನ್ನು ಮುಂದುವರಿಸಲು ಅಗ್ನಿವೇಶ್ ಬಹುದೊಡ್ಡ ಪಾತ್ರ ನಿಭಾಯಿಸಲಿದ್ದಾರೆ ಎಂದಿದ್ದಾರೆಂದು ವರದಿ ತಿಳಿಸಿದೆ.

  ಯುಪಿಎ ಸರಕಾರದ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಝಾರೆ ಆಂದೋಲನಕ್ಕಿಳಿದಿದ್ದ ಸಂದರ್ಭದಲ್ಲಿ ಅಗ್ನಿವೇಶ್ ಅಣ್ಣಾ ತಂಡದ ಸದಸ್ಯರಾಗಿ ಪ್ರಸಿದ್ಧರಾಗಿದ್ದರು. ಆದ್ದರಿಂದ ಅವರನ್ನು ಆಂದೋಲನದಲ್ಲಿ ಮೂಲೆಗೊತ್ತಲಾಗಿತ್ತು. ಆಂದೋಲನದಿಂದ ದೂರವಾದ ಬಳಿಕ ಆದಿವಾಸಿಗಳ ಹಕ್ಕುಗಳಿಗಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಸ್ತರದಲ್ಲಿ ತನ್ನ ಹೋರಾಟ ವನ್ನು ಮುಂದುವರಿಸಿದ್ದರು. ಹರಿಯಾಣದ ಮಾಜಿ ಶಾಸಕರಾದ ಅಗ್ನಿವೇಶ್ ಈಗ ಮತ್ತೊಮ್ಮೆ ಸಕ್ರಿಯ ರಾಜಕಾರಣಕ್ಕೆ ಧುಮುಕಿದಂತಾಗಿದೆ. ತನ್ನನ್ನು ನಿತೀಶ್ ಕುಮಾರ್‌ರ ಮದ್ಯಪಾನ ನಿರೋಧ ನೀತಿ ಬಹಳ ಪ್ರಭಾವಕ್ಕೊಳಪಡಿಸಿದೆ ಎಂದು ಜೆಡಿಯು ಪಕ್ಷಕ್ಕೆ ಸೇರುವ ವೇಳೆ ಅವರು ಹೇಳಿದ್ದು, ಮದ್ಯಪಾನ ನಿರೋಧಕ್ಕಾಗಿ ದೇಶಾದ್ಯಂತ ಚಳವಳಿ ನಡೆಸಲು ಅವರು ಬಯಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News