ಮಾಜಿ ರಾಯಭಾರಿ ಅರುಂಧತಿ ಘೋಷ್ ಇನ್ನಿಲ್ಲ

Update: 2016-07-26 14:45 GMT

ಹೊಸದಿಲ್ಲಿ,ಜು.26: ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿದ್ದು, ಸಮಗ್ರ ಪರಮಾಣು ಪರೀಕ್ಷೆ ನಿಷೇಧ ಒಪ್ಪಂದ ಕುರಿತಂತೆ ಭಾರತದ ಮಾತುಕತೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಗಣ್ಯ ರಾಜಕೀಯ ಮುತ್ಸದ್ದಿ ಅರುಂಧತಿ ಘೋಷ್(76) ಅವರು ಮಂಗಳವಾರ ಬೆಳಗಿನ ಜಾವ ಪಶ್ಚಿಮ ದಿಲ್ಲಿಯ ಪಾಲಂ ವಿಹಾರ್‌ನ ತನ್ನ ನಿವಾಸದಲ್ಲಿ ನಿಧನರಾದರು. ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
ತನ್ನ ವೃತ್ತಿಜೀವನದಲ್ಲಿ ಆಸ್ಟ್ರಿಯಾ,ನೆದರಲಂಡ್ಸ್,ಬಾಂಗ್ಲಾದೇಶ,ದ.ಕೊರಿಯಾ ಮತ್ತು ಈಜಿಪ್ತಗಳಲ್ಲಿ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದ ಅವರು ಜಿನೆವಾದಲ್ಲಿರುವ ವಿಶ್ವಸಂಸ್ಥೆ ಕಚೇರಿಯಲ್ಲಿ ಮೊದಲ ಭಾರತೀಯ ಖಾಯಂ ಪ್ರತಿನಿಧಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News