ಹಿರಿಯ ನಾಗರಿಕರಿಗಾಗಿ ಹೊಸನೀತಿ ತರಲು ಸರಕಾರದ ಪರಿಶೀಲನೆ

Update: 2016-07-26 18:17 GMT

ಹೊಸದಿಲ್ಲಿ, ಜು.26: ಹಿರಿಯ ನಾಗರಿಕರಿಗಾಗಿ ಹೊಸ ನೀತಿಯೊಂದನ್ನು ಜಾರಿಗೆ ತರುವ ಬಗ್ಗೆ ಸರಕಾರವು ಪರಿಶೀಲಿಸುತ್ತಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರಚಂದ್ ಗೆಹ್ಲೋಟ್ ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.

  ಶ್ರೀಕಾಂತ ಶಿಂದೆ(ಶಿವಸೇನೆ)ಯವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ನೂತನ ನೀತಿಯ ಅಂಗವಾಗಿ ವೃದ್ಧಾಶ್ರಮಗಳು ಟಿವಿಯಲ್ಲಿ ವಿವಿಧ ವಾಹಿನಿಗಳು ಸೇರಿದಂತೆ ಮನರಂಜನೆಯ ಸಾಧನಗಳೊಂದಿಗೆ ಉತ್ತಮ ವಾತಾವರಣವನ್ನು ಹೊಂದಲಿವೆ ಎಂದು ತಿಳಿಸಿದರು.
ಹಿರಿಯ ನಾಗರಿಕರ ಕುರಿತು ಇತ್ತೀಚಿನ ಸಮೀಕ್ಷೆ ಯೊಂದರಲ್ಲಿ ಭಾರತವು ಕಳಪೆ ಸ್ಥಾನದಲ್ಲಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದು ಶಿಂದೆ ಹೇಳಿದ್ದರು.
‘ನಾಚಿಕೆಗೇಡು’ ಶಬ್ದದ ಬಳಕೆಯ ಬಗ್ಗೆ ಶಿಂದೆಯವರಿಗೆ ಕಿವಿಮಾತು ಹೇಳಿದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಶಿಂದೆಯವರಂತಹ ಯುವಕರು ತಮ್ಮ ಕುಟುಂಬಗಳಲ್ಲಿಯ ವೃದ್ಧರ ಕಾಳಜಿ ವಹಿಸಿದರೆ ಇಂತಹ ನೀತಿಗಳ ಅಗತ್ಯವೇ ಇರುವುದಿಲ್ಲ ಎಂದರು.
1999ರಲ್ಲಿ ಹಿರಿಯ ನಾಗರಿಕರ ಕುರಿತು ನೀತಿಯೊಂದನ್ನು ಅಳವಡಿಸಿಕೊಳ್ಳಲಾಗಿದ್ದು, 60 ವರ್ಷಕ್ಕಿಂತ ಹೆಚ್ಚಿನವರನ್ನು ಹಿರಿಯ ನಾಗರಿಕರೆಂದು ಪರಿಗಣಿಸಿ ಅವರಿಗಾಗಿ ಕೆಲವು ಸೌಲಭ್ಯಗಳನ್ನು ಒದಗಿಸಲಾಗಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News