ಎನ್‌ಡಿಎ ಸರಕಾರದ ಕಲ್ಲಿದ್ದಲು ಗಣಿ ಹರಾಜಿನಲ್ಲಿ ಅಕ್ರಮ

Update: 2016-07-26 18:20 GMT

ಹೊಸದಿಲ್ಲಿ, ಜು.26: ಎನ್‌ಡಿಎ ಸರಕಾರವು ಕಳೆದ ವರ್ಷ ನಡೆಸಿದ್ದ ಕಲ್ಲಿದ್ದಲು ಗಣಿಗಳ ಇ-ಹರಾಜಿನಲ್ಲಿ ಲೋಪದೋಷಗಳನ್ನು ಪತ್ತೆ ಹಚ್ಚಿರುವ ಮಹಾಲೇಖಪಾಲರು(ಸಿಎಜಿ),ಕಾರ್ಪೊರೇಟ್ ಗುಂಪುಗಳು ಜಂಟಿ ಪ್ರವರ್ತನೆ(ಜೆವಿ)ಗಳು ಅಥವಾ ಅಂಗಸಂಸ್ಥೆಗಳ ಮೂಲಕ ಒಂದಕ್ಕಿಂತ ಹೆಚ್ಚಿನ ಬಿಡ್‌ಗಳನ್ನು ಸಲ್ಲಿಸಿದ್ದವು. ಹೀಗಾಗಿ ಮೊದಲ ಎರಡು ಸುತ್ತಿನ ಹರಾಜುಗಳಲ್ಲಿ ಸ್ಪರ್ಧೆಯ ಸಂಭಾವ್ಯ ಮಟ್ಟವನ್ನು ಸಾಧಿಸಲಾಗಿರುವ ಬಗ್ಗೆ ಖಚಿತಗೊಂಡಿಲ್ಲ ಎಂದು ಹೇಳಿದ್ದಾರೆ.

 ಜೆವಿಗಳು ಅಥವಾ ಅಂಗಸಂಸ್ಥೆಗಳ ಮೂಲಕ ಕಾರ್ಪೊರೇಟ್ ಗುಂಪುಗಳು ಒಂದಕ್ಕಿಂತ ಹೆಚ್ಚು ಬಿಡ್‌ಗಳನ್ನು ಸಲ್ಲಿಸಿದ್ದರಿಂದ 11 ಗಣಿಗಳ ಹರಾಜಿನಲ್ಲಿ ಹೆಚ್ಚಿನ ಸ್ಪರ್ಧೆಯನ್ನು ನಿಯಂತ್ರಿಸಲಾಗಿತ್ತು ಎಂಬಂತೆ ಕಂಡು ಬರುತ್ತಿದೆ ಎಂದು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಲಾದ ವರದಿಯಲ್ಲಿ ಸಿಎಜಿ ಬೆಟ್ಟು ಮಾಡಿದ್ದಾರೆ.
ಮೊದಲ ಎರಡು ಸುತ್ತುಗಳಲ್ಲಿ ಇ-ಹರಾಜು ಯಶಸ್ವಿಗೊಂಡ 29 ಗಣಿಗಳ ಪೈಕಿ 11 ಗಣಿಗಳಲ್ಲಿ ಹೆಚ್ಚಿನ ಯಶಸ್ವಿ ಬಿಡ್‌ದಾರರು ಕಾರ್ಪೊರೇಟ್ ಗುಂಪುಗಳ ಜೆವಿಗಳು ಅಥವಾ ಅಂಗಸಂಸ್ಥೆಗಳೇಆಗಿದ್ದವು ಎಂದು ವರದಿಯು ಹೇಳಿದೆ.
ಮೂರನೇ ಸುತ್ತಿನ ಹರಾಜಿನ ವೇಳೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿ ಸಲು ಜೆವಿ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ನಿಯಮ ವನ್ನು ಕಲ್ಲಿದ್ದಲು ಸಚಿವಾಲಯವು ತಿದ್ದುಪಡಿ ಗೊಳಿಸಿತ್ತು ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News