ಕಾಶ್ಮೀರದಲ್ಲಿ ಆಫ್‌ಸ್ಪಾ ಹಿಂದೆಗೆತ

Update: 2016-07-26 18:21 GMT

ಹೊಸದಿಲ್ಲಿ, ಜು.26: ಪ್ರಾಯೋಗಿಕ ನೆಲೆಯಲ್ಲಿ ಕೆಲವು ಭಾಗಗಳಲ್ಲಿ ಆಫ್‌ಸ್ಪಾ ಹಿಂದೆ ಪಡೆಯಬೇಕೆಂಬ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರ ಅಭಿಪ್ರಾಯದಿಂದ ನುಣುಚಿಕೊಂಡಿರುವ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್, ಆ ವಿಷಯ ಗೃಹ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಅದು ಈ ವಿಚಾರದಲ್ಲಿ ನಿರ್ಧಾರವೊಂದನ್ನು ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಗಡಿಯಲ್ಲಿ ಭದ್ರತೆಗೆ ಹಾಗೂ ಉಗ್ರಗಾಮಿ ಪೀಡಿತ ರಾಜ್ಯದ ಉಗ್ರವಾದ ದಮನ ಜಾಲದಲ್ಲಿ ಸೇನೆ ತೊಡಗಿಕೊಂಡಿದೆ. ಆ ಬಗ್ಗೆ ಗೃಹ ಸಚಿವಾಲಯ ನಿರ್ಧಾರ ಕೈಗೊಳ್ಳಬೇಕೆನ್ನುವುದು ತನ್ನ ಅಭಿಪ್ರಾಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ತಾವು ಕೇವಲ ಗಡಿಯಲ್ಲಿ ಹಾಗೂ ಉಗ್ರವಾದ ದಮನ ಜಾಲದಲ್ಲಿಯಷ್ಟೇ ಕಾರ್ಯಾಚರಿಸುತ್ತಿದ್ದೇವೆ. ತಾವು ರಾಜ್ಯದ ಕಾನೂನು-ಸುವ್ಯವಸ್ಥೆಯ ಸಾಮಾನ್ಯ ಕ್ಷೇತ್ರದಲ್ಲಿ ಕಾರ್ಯಾಚರಿಸುತ್ತಿಲ್ಲವೆಂದು ಅವರು ಹೇಳಿದ್ದಾರೆ.
ಸೇನೆಯು ಗಡಿಯು ಭದ್ರವಾಗಿರುವುದನ್ನು ಹಾಗೂ ಯಾವುದೇ ಒಳ ನುಸುಳುವಿಕೆ ಪ್ರಯತ್ನ ಯಶಸ್ವಿಯಾಗದಂತೆ ಖಚಿತಪಡಿಸುತ್ತದೆ. ತಾವು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದೇವೆಂದು ಪಾರಿಕ್ಕರ್ ತಿಳಿಸಿದ್ದಾರೆ.
 ಜನರ ಮನ ಗೆಲ್ಲುವ ಆರಂಭದ ಕ್ರಮವಾಗಿ ಆಯ್ದ ಪ್ರದೇಶಗಳಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಆಫ್‌ಸ್ಪಾ(ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ) ಹಿಂಪಡೆಯಬೇಕೆಂದು ಮೆಹಬೂಬ ರವಿವಾರ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News