ಕಬಾಲಿ ಸಿನೆಮಾ: ತಮಿಳು ಸಾಹಿತಿ, ಬಾಲಿವುಡ್ ನಟನಿಂದ ವಿಮರ್ಶೆ

Update: 2016-07-27 10:29 GMT

ಚೆನೈ,ಜುಲೈ 27: ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್‌ಆಗಿ ಮುನ್ನುಗ್ಗುತ್ತಿರುವ ಸ್ಟೈಲ್ ಕಿಂಗ್ ರಜನೀಕಾಂತ್‌ರ ಕಬಾಲಿ ಸಿನೆಮಾವನ್ನು ಬಾಲಿವುಡ್ ನಟ ನಾನಾಪಾಟ್ಕರ್ ಹಾಗೂ ತಮಿಳುಕವಿ, ಚಲನಚಿತ್ರ ಹಾಡುಗಳ ರಚನಾಕಾರ ವೈರಮುತ್ತು ವಿಮರ್ಶಿಸಿದ್ದಾರೆಂದು ವರದಿಯಾಗಿದೆ.

 ಚೆನ್ನೈಯಲ್ಲಿ ನಡೆದ ಅರಿಮ ಸಂಗಮದಲ್ಲಿ ಕಬಾಲಿಯನ್ನು ವೈರಮುತ್ತು ವಿಮರ್ಶಿಸಿದ್ದು, "ನನಗೆ ಇಲ್ಲಿರುವ ಎಲ್ಲರೂ ಪರಿಚಯಸ್ಥರು. ಈ ನಾಡಿನ ಘಟನೆ ಬೆಳವಣಿಗೆಗೆಳ ಕುರಿತು ಅರಿವಿದೆ. ವಿಜ್ಞಾನದ ಕುರಿತು ಅರಿವಿದೆ. ನಾಪತ್ತೆಯಾದ ಮಲೇಶ್ಯದ ವಿಮಾನದ ಕುರಿತು ತಿಳಿದಿದೆ. ಕಬಾಲಿ ಒಂದು ವಿಫಲ ಸಿನೆಮಾವಾಗಿದೆ ಎಂದು ತಿಳಿದಿದೆ. ಇವೆಲ್ಲವನ್ನು ಎಲ್ಲರೂ ಅರಿತಿರಬೇಕಾಗಿದೆ.ಒಂದು ಉತ್ತಮ ಕವಿತೆ ಇವೆಲ್ಲ ವಿಶ್ಲೇಷಣೆ ಹಾಗೂ ಅರ್ಥಮಾಡಿಕೊಳ್ಳಲು ಜನರಿಗೆ ಕಲಿಸುತ್ತದೆ" ಎಂದು ವೈರಮುತ್ತು ಹೇಳಿದ್ದಾರೆನ್ನಲಾಗಿದೆ.

 " ಕಬಾಲಿ ಒಬ್ಬ ನಟನ ಸಿನೆಮಾ ಅಲ್ಲ. ಓರ್ವ ಸೂಪರ್ ಸ್ಟಾರ್ ಸಿನೆಮಾವಾಗಿದೆ. ವಾಸ್ತವದಲ್ಲಿ ಸಿನೆಮಾವೇ ಸೂಪರ್ ಸ್ಟಾರ್ ಆಗಿದೆ. ಸಿನೆಮಾದ ಚಿತ್ರಕಥೆ. ನಿರ್ದೇಶನ ಉತ್ತಮವಾದರೆ ಹೊಸಮುಖಗಳು ಅಭಿನಯಿಸಿದರೂ ಯಶಸ್ವಿಯಾಗುತ್ತದೆ. ಸಿನೆಮಾ ಉತ್ತಮವಿಲ್ಲದಿದ್ದರೆ ಬಿಡುಗಡೆಗೊಂಡು ಮೂರು ನಾಲ್ಕುದಿನಗಳಲ್ಲಿ ಅದರ ಅಲೆಕೊನೆಗೊಳ್ಳುತ್ತದೆ" ಎಂದು ನಾನಾಪಾಟ್ಕರ್ ಹೇಳಿದ್ದಾರೆಂದು ವರದಿ ತಿಳಿಸಿದೆ.

   ಸಿನೆಮಾಜಗತ್ತಿನಲ್ಲಿ ಕೆಲವೆಡೆ ಕಬಾಲಿ ಅತ್ಯಂತದೊಡ್ಡ ಚರ್ಚಾವಿಷಯವೆನಿಸಿಕೊಂಡಿದೆ. ಇದುವರೆಗೂ ಭಾರತೀಯ ಸಿನೆಮಾ ರಂಗ ಕಂಡರಿಯದಂತಹ ಪ್ರಚಾರ ಕಾರ್ಯಕ್ರಮಗಳು ಕಬಾಲಿಗಾಗಿ ನಡೆದಿತ್ತು. ಆದರೆ ಸಿನೆಮಾದ ಕುರಿತು ಸಮ್ಮಿಶ್ರ ಪ್ರತಿಕ್ರಿಯೆಗಳು ಹೊರ ಬರುತ್ತಿವೆ ಎನ್ನಲಾಗಿದ್ದು ಭಾರತವಲ್ಲದೆ, ಜಪಾನ್, ಅಮೆರಿಕ ಮಲೇಶ್ಯಾದಲ್ಲಿ ಸಿನೆಮಾಕ್ಕೆ ಅದ್ದೂರಿ ಸ್ವಾಗತ ಲಭಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News