ರೈಲ್ವೆ ಟಿಕೆಟ್ ಕಾದಿರಿಸುವವರಿಗೆ 1 ರೂಪಾಯಿಗೆ ಪ್ರಯಾಣ ವಿಮೆ ಸೌಲಭ್ಯ

Update: 2016-07-28 04:59 GMT

ಹೊಸದಿಲ್ಲಿ, ಜು.28: ಆನ್ಲೈನ್ ನಲ್ಲಿ ಐಆರ್ ಸಿಟಿಸಿ ಮೂಲಕ ರೈಲ್ವೆ ಟಿಕೆಟ್ ಕಾಯ್ದಿರಿಸುವವರು ಸೆಪ್ಟಂಬರ್ 1ರಿಂದ ಒಂದು ರೂಪಾಯಿ ವಿಮಾ ಕಂತು ಪಾವತಿಸಿ ಪ್ರಯಾಣ ವಿಮಾ ಸೌಲಭ್ಯ ಪಡೆಯಬಹುದಾಗಿದೆ.

ಈ ಯೋಜನೆಯಡಿ, ಪ್ರಯಾಣದ ವೇಳೆ ಯಾವುದೇ ಅವಘಡ ಸಂಭವಿಸಿ, ಪ್ರಯಾಣಿಕ ಮೃತಪಟ್ಟರೆ ಅಥವಾ ಕಾಯಂ ಸಂಪೂರ್ಣ ಅಂಗವೈಕಲ್ಯಕ್ಕೆ ಒಳಗಾದರೆ, 10 ಲಕ್ಷ ರೂಪಾಯಿವರೆಗೂ ಪರಿಹಾರ ಪಡೆಯಬಹುದು. ಭಾಗಶಃ ಕಾಯಂ ಅಂಗವೈಕಲ್ಯಕ್ಕೆ ಒಳಗಾದರೆ 7.5 ಲಕ್ಷ ಹಾಗೂ ಆಸ್ಪತ್ರೆಗೆ ದಾಖಲಾದರೆ 2 ಲಕ್ಷ ವರೆಗೂ ಪರಿಹಾರ ಪಡೆಯಬಹುದು. ಇದರ ಜತೆಗೆ ಪ್ರಯಾಣಿಕ ಮೃತಪಟ್ಟರೆ, ಮೃತದೇಹವನ್ನು ಸಾಗಿಸಲು 10 ಸಾವಿರ ರೂಪಾಯಿವರೆಗೂ ಪರಿಹಾರ ಪಡೆಯಬಹುದಾಗಿದೆ. ರೈಲು ಅಪಘಾತ, ಭಯೋತ್ಪಾದಕ ದಾಳಿ, ಡಕಾಯಿತಿ, ದೊಂಬಿ, ಶೂಟೌಟ್ ಗಳಂಥ ಅನಾಹುತಗಳಿಗೆ ಇದು ಅನ್ವಯಿಸುತ್ತದೆ. ಐಆರ್ ಸಿಟಿಸಿ ವೆಬ್ ಸೈಟ್ ಮೂಲಕ ಇ- ಟಿಕೆಟ್ ಕಾಯ್ದಿರಿಸುವ ಎಲ್ಲರೂ ಈ ಸೌಲಭ್ಯ ಪಡೆಯಬಹುದು. ಉಪನಗರ ರೈಲುಗಳಿಗೆ ಮಾತ್ರ ಇದು ಅನ್ವಯಿಸುವುದಿಲ್ಲ.

ಈ ಯೋಜನೆಯನ್ನು ಐಆರ್ ಸಿಟಿಸಿ, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ , ರಾಯಲ್ ಸುಂದರಮ್ ಹಾಗೂ ಶ್ರೀರಾಮ್ ಜನರಲ್ ಸಹಯೋಗದಲ್ಲಿ ಅನುಷ್ಠಾನಕ್ಕೆ ತರಲಿದೆ. ಬಿಡ್ಡಿಂಗ್ ನಲ್ಲಿ ಭಾಗವಹಿಸಿದ್ದ 19 ವಿಮಾ ಕಂಪೆನಿಗಳ ಪೈಕಿ ಮೂರನ್ನು ಆಯ್ಕೆ ಮಾಡಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News