ಮುಂಬೈನಲ್ಲಿ ಇಂಡಿಗೊ ವಿಮಾನ ತುರ್ತು ಭೂ ಸ್ಪರ್ಶ

Update: 2016-07-28 06:43 GMT

 ಮುಂಬೈ, ಜು.28: ದುಬೈನಿಂದ ಕೋಝಿಕೋಡ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನದೊಳಗೆ ಇಬ್ಬರು ಪ್ರಯಾಣಿಕರು ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಮುಂಬೈನಲ್ಲಿ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿರುವ ಅಪರೂಪದ ಘಟನೆ ಗುರುವಾರ ನಡೆದಿದೆ.
ಬೆಳಗ್ಗೆ 9:15ರ ಸುಮಾರಿಗೆ ಮುಂಬೈನಲ್ಲಿ ವಿಮಾನ ಕೆಳಗಿಳಿದಿತ್ತು. ವಿಮಾನದೊಳಗೆ ಹೊಡೆದಾಡಿಕೊಂಡಿದ್ದ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದೆ.
ಇಂಡಿಗೋ ವಿಮಾನ ಸುಮಾರು ಎರಡು ಗಂಟೆಗಳ ಬಳಿಕ ಮುಂಬೈನಿಂದ ಕೋಝಿಕೋಡ್‌ಗೆ ಪ್ರಯಾಣ ಮುಂದುವರಿಸಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News