ರಕ್ಷಣಾ ಕ್ಷೇತ್ರಕ್ಕೆ ವಿದೇಶಿ ಬಂಡವಾಳ: ಮೋದಿ ಸರಕಾರ ಪಶ್ಚಾತ್ತಾಪ ಪಡಲಿದೆ – ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ

Update: 2016-07-28 07:30 GMT

ಹೊಸದಿಲ್ಲಿ,ಜುಲೈ 28: ರಕ್ಷಣಾ ಕ್ಷೇತ್ರಕ್ಕೆ ನೇರ ವಿದೇಶಿ ಬಂಡವಾಳವನ್ನು ಸ್ವೀಕರಿಸುವ ಮೋದಿಸರಕಾರದ ತೀರ್ಮಾನಕ್ಕಾಗಿ ಅದು ಪಶ್ಚಾತ್ತಾಪ ಪಡಬೇಕಾಗಬಹುದೆಂದು ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಎಚ್ಚರಿಕೆ ನೀಡಿದ್ದಾರೆ. ರಕ್ಷಣೆಗೆ ಸಂಬಂಧಿಸಿರುವ ಸಚಿವ ಸಂಪುಟದ ಸಮಿತಿಗೂ ತಿಳಿಸದೆ ದೇಶದ ರಕ್ಷಣೆಗೆ ಬಾಧಕವೆನಿಸಬಹುದಾದ ಇಂತಹ ವಿಷಯದಲ್ಲಿ ತಿರ್ಮಾನಕೈಗೊಳ್ಳಲಾಗಿದೆ ಎಂದು ಎ.ಕೆ. ಆ್ಯಂಟನಿ ಆರೋಪಿಸಿದ್ದಾರೆ.ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಅವರು ಮೋದಿ ಸರಕಾರದ ತೀರ್ಮಾನವನ್ನು ಅತಿ ಕಟುವಾಗಿ ಟೀಕಿಸಿದರೆಂದು ವರದಿಯಾಗಿದೆ.

ಪ್ರಧಾನ ಮಂತ್ರಿಯಲ್ಲದೆ ಹಣಕಾಸು ಸಚಿವ, ಗೃಹಸಚಿವ, ರಕ್ಷಣಾ ಸಚಿವರಿರುವ ಸಚಿವಸಂಪುಟದ ಸಮಿತಿ ಅನುಮತಿ ನೀಡದೆ ಹೇಗೆ ಇಂತಹ ವಿಷಯಗಳನ್ನು ತೀರ್ಮಾನಿಸಲಾಯಿತು ಎಂದು ಸಭೆಯಲ್ಲಿದ್ದ ಗೃಹಸಚಿವರು ಹಾಗೂ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಂರೊಡನೆ ಎ.ಕೆ. ಆ್ಯಂಟನಿ ಪ್ರಶ್ನಿಸಿದ್ದಾರೆ.ಈ ನಿರ್ಧಾರದಿಂದಾಗಿ ದೇಶ ಬಹುದೊಡ್ಡ ಬೆಲೆ ತೆರಬೇಕಾದೀತು ಮತ್ತು ಇದಕ್ಕಾಗಿ ಸರಕಾರ ಪಶ್ಚಾತ್ತಾಪ ಪಡಬೇಕಾದೀತು ಎಂದು ಅವರು ಸರಕಾರಕ್ಕೆ ಮುನ್ನೆಚ್ಚರಿಕೆ ನೀಡಿದ್ದಾರೆಂದು ವರದಿ ತಿಳಿಸಿದೆ.

ಇದು ದೇಶದ ವೈಜ್ಞಾನಿಕ ಸಮೂಹದ ಮನೋಬಲ ಕೆಡವಿಹಾಕುವ ಕ್ರಮವಾಗಿಹೋಯಿತು. ಇದು ಸರಕಾರಿ ಸಂಸ್ಥೆಯಾದ ಡಿಆರ್‌ಡಿಯನ್ನು ಹೆಚ್ಚು ಬಾಧಿಸಲಿದೆ ಎಂದು ಎ.ಕೆ. ಆ್ಯಂಟನಿ ನೆನಪಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News