ಕರ್ನಾಟಕ ಬಂದ್‌; ರಾಜಧಾನಿಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತ

Update: 2016-07-30 04:51 GMT

ಬೆಂಗಳೂರು, ಜು.30: ಮಹಾದಾಯಿ ನ್ಯಾಯಾಧಿಕರಣದ ತೀರ್ಪಿನಿಂದಾಗಿ ರಾಜ್ಯಕ್ಕಾಗಿರುವ ಅನ್ಯಾಯವನ್ನು  ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ  ಬಂದ್ ಗೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.
ಮಳೆಗೆ ಮಹಾಮಳೆಗೆ ತತ್ತರಗೊಂಡ  ರಾಜಧಾನಿಯಲ್ಲಿ ಚಿತ್ರ ಮಂದಿರಗಳು, ಹೋಟೆಲ್‌, ಆಭರಣ ಅಂಗಡಿಗಳು ಬಂದ್‌ ಆಗಿದೆ. ಮಹಾಮಳೆಗೆ ತತ್ತರಗೊಂಡ ರಾಜಧಾನಿ ಬಂದ್‌ನಿಂದಾಗಿ ಜನಜೀವನ ಪೂರ್ತಿ ಅಸ್ತವ್ಯಸ್ಥಗೊಂಡಿದೆ.ನಗರದಲ್ಲಿ  ಅಣಕು ಶವಯಾತ್ರೆ,ಏರ‍್ ಪೋರ್ಟ್‌ , ರೈಲು ನಿಲ್ದಾಣ, ಮೆಟ್ರೋ ರೈಲಿಗೆ ಮುತ್ತಿಗೆ ನಡೆದಿದೆ

  ಸಾಂಸ್ಕೃತಿಕ ನಗರಿ ಮೈಸೂರು, ಕುಂದಾನಗರಿ  ಬೆಳಗಾವಿ, ಅವಳಿ ನಗರಗಳಾದ ಹುಬ್ಬಳಿ-ಧಾರವಾಡ ಮತ್ತಿತರ ಪ್ರಮುಖ ನಗರಗಳಲ್ಲಿ ಬಂದ್ ನಿಂದಾಗಿ ಸಂಪೂರ್ಣ  ಜನಜೀವನ ಅಸ್ತವ್ಯಸ್ತಗೊಂಡಿದೆ.  ಕೆಎಸ್ ಆರ‍್ ಟಿಸಿ ನೌಕರರು ಬಂದ್ ಗೆ ಬೆಂಬಲ ನೀಡಿದ್ದು, ಸರಕಾರಿ ಬಸ್ ಸೇವೆಗಳು ಸ್ಥಗಿತಗೊಂಡಿವೆ. ಆಟೋ ,ಟ್ಯಾಕ್ಸಿ, ಕ್ಯಾಬ್ ಸೇವೆ ಸ್ಥಗಿತಗೊಂಡಿದೆ.
 ಕನ್ನಡಪರ ಸಂಘಟನೆಗಳ ಮಹಿಳಾ ಕಾರ್ಯಕರ್ತರು ಧಾರವಾಡದಲ್ಲಿ ಬೀದಿಗಿಳಿದು  ಹೆದ್ದಾರಿ ತಡೆ ನಿರ್ಮಿಸುವ  ಮೂಲಕ ತಮ್ಮ  ಪ್ರತಿಭಟನೆ ವ್ಯಕ್ತಪಡಿಸಿದರು. ಚಾಮರಾಜನಗರದಲ್ಲಿ  ಬಸ್‌ ಓಡಾಟ ಸ್ಥಗಿತಗೊಂಡಿದೆ. ಶಾಲಾ-ಕಾಲೇಜುಗಳಿಗೆ ರಜೆ ನೀಡದ ಹಿನ್ನಲೆಯಲ್ಲಿ  ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ. 
ಕುಂದಾನಗರಿ ಬೆಳಗಾವಿಯಲ್ಲಿ   ಬಸ್ ಸೇವೆಗಳು ಸ್ಥಗಿತಗೊಂಡಿವೆ. ಸಕ್ಕರೆ ನಾಡು ಮಂಡ್ಯದಲ್ಲಿ  ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮೈಸೂರು-ಮಂಡ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿರುವುದು ವರದಿಯಾಗಿದೆ. 

ದಕ್ಷಿಣ ಕನ್ನಡದಲ್ಲಿ ಬಂದ್‌ ಪರಿಣಾಮ ಬೀರಿಲ್ಲ. ಶಾಲಾ ಕಾಲೇಜುಗಳಿಗೆ ಎಂದಿನಿಂತೆ ತೆರೆದಿದೆ. ಆದರೆ ಸರಕಾರಿ ಬಸ್‌ಗಳು ಓಡಾಟ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News