ಉತ್ತರಪ್ರದೇಶ: ತಾಯಿಮಗಳ ಸಾಮೂಹಿಕ ಅತ್ಯಾಚಾರ ಪ್ರಕರಣ - 15 ಮಂದಿ ಬಂಧನ

Update: 2016-07-31 09:27 GMT

      ಬುಲಂದೇಶ್ವರ್,ಜುಲೈ 31: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಮತ್ತು ಮಗಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಹದಿನೈದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಯಿ ಮತ್ತು ಅಪ್ರಾಪ್ತ ಮಗಳು ಕುಟುಂಬಸಹಿತ ನೋಯಿಡದಿಂದ ಶಾಜಹಾನ್‌ಪುರಕ್ಕೆ ಕುಟುಂಬ ಸಮೇತ ಹೋಗುತ್ತಿದ್ದಾಗ ದೋಸ್ತ್‌ಪುರ ಗ್ರಾಮದಲ್ಲಿ ಕೆಟ್ಟು ನಿಂತ ಕಾರಿನಿಂದ ಮಹಿಳೆಮತ್ತು ಆಕೆಯ ಪುತ್ರಿಯನ್ನು ಎಳೆದೊಯ್ದ ಐದು ಮಂದಿ ಅವರಿಬ್ಬರನ್ನು ಅತ್ಯಾಚಾರಗೈದಿದ್ದರು ಎಂದು ಈ ಮೊದಲು ವರದಿಯಾಗಿತ್ತು. ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಹದಿನೈದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಕಳೆದ ಶುಕ್ರವಾರ ರಾತ್ರೆ ಇವರು ದಿಲ್ಲಿಯಿಂದ ಶಹಾಜಹಾನ್‌ಪುರಕ್ಕೆ ತೆರಳುತ್ತಿದ್ದಾಗ ದಿಲ್ಲಿ-ಕಾನ್ಪುರ ಹೈವೆ 91ರದಲ್ಲಿರುವ ದೋಸ್ತ್‌ಪುರ ಗ್ರಾಮದ ಬಳಿ ಘಟನೆ ನಡೆದಿತ್ತು.

     ರಸ್ತೆಯ ಮಧ್ಯೆ ದುಷ್ಕರ್ಮಿಗಳು ಅಡ್ಡಲಾಗಿಟ್ಟಿದ್ದ ವಸ್ತು ಕಾರಿಗೆ ಢಿಕ್ಕಿಯಾದ್ದರಿಂದ ಕುಟುಂಬದ ಕಾರು ಕೆಟ್ಟು ನಿಂತಿತ್ತುಎಂದು ಪೊಲೀಸ್ ಮೂಲಗಳು ಹೇಳಿವೆ. ನಂತರ ರಸ್ತೆಯ ಬದಿಯಲ್ಲಿ ಅಡಗಿ ಕೂತ ದುಷ್ಕರ್ಮಿಗಳ ತಂಡ ಕಾರಿನಲ್ಲಿದ್ದವರಿಗೆ ಬಂದೂಕು ತೋರಿಸಿ ಅವರಲ್ಲಿದ್ದ ಹಣ, ಚಿನ್ನ, ಮೊಬೈಲ್ ಫೋನ್‌ಗಳನ್ನು ದೋಚಿತ್ತು. ಕುಟುಂಬದ ಗಂಡಸರನ್ನು ಹಗ್ಗದಿಂದ ಕಟ್ಟಿಹಾಕಿತ್ತು. ತಾಯಿ ಮಗಳನ್ನು ಬೇರೊಂದು ಸ್ಥಳಕ್ಕೆ ಎಳೆದೊಯ್ದು ಅತ್ಯಾಚಾರಮಾಡಿದ್ದರು. ನಂತರ ಆರೋಪಿಗಳು ಓಡಿ ಪರಾರಿಯಾಗಿದ್ದರು ಎಂದು ವರದಿಯಾಗಿತ್ತು.

ಹಾನಿಗೀಡಾದ ಕಾರನ್ನು ದುರಸ್ತಿಮಾಡಲು ಸಾಧ್ಯವಾಗದೆ ಕುಟುಂಬ ಅಂದು ರಾತ್ರಿಯಿಡೀ ನಿರ್ಜನ ಸ್ಥಳದಲ್ಲಿ ಉಳಿಯಬೇಕಾಗಿ ಬಂದಿತ್ತೆನ್ನಲಾಗಿದೆ. ಶನಿವಾರ ಬೆಳಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಕುಟುಂಬ ದೂರು ನೀಡಿತ್ತು. ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News