ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 1.93 ರೂ.ಏರಿಕೆ

Update: 2016-08-01 14:43 GMT

ಹೊಸದಿಲ್ಲಿ,ಆ.1: ಗೃಹಬಳಕೆಯ ಅಡುಗೆ ಅನಿಲದ ಬೆಲೆಯನ್ನು ಸೋಮವಾರ ಪ್ರತಿ ಸಿಲಿಂಡರ್‌ಗೆ 1.93 ರೂ.ಗಳಷ್ಟು ಹೆಚ್ಚಿಸಲಾಗಿದೆ. ಸಬ್ಸಿಡಿ ಪ್ರಮಾಣವನ್ನು ಕಡಿತಗೊಳಿಸಲು ಸರಕಾರವು ಉದ್ದೇಶಿಸಿದ್ದು, ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಬೆಲೆಯನ್ನು ಹೆಚ್ಚಿಸಲಾಗಿದೆ.

ಕಳೆದ ಬಾರಿ ಜುಲೈ 1ರಂದು ಪ್ರತಿ ಸಿಲಿಂಡರ್‌ಗೆ 1.98 ರೂ.ಬೆಲೆ ಹೆಚ್ಚಿಸಲಾಗಿತ್ತು.

ಸಬ್ಸಿಡಿಯನ್ನು ತೊಡೆದು ಹಾಕಲು ಪ್ರತಿ ಲೀ.ಡೀಸೆಲ್ ಬೆಲೆಯನ್ನು ಪ್ರತಿ ತಿಂಗಳು 50 ಪೈಸೆಯಂತೆ ಹೆಚ್ಚಿಸಲು ಹಿಂದಿನ ಯುಪಿಎ ಸರಕಾರವು ನಿರ್ಧರಿಸಿದ್ದು,ಬಳಿಕ 2014,ನವೆಂಬರ್‌ನಲ್ಲಿ ಡೀಸೆಲ್‌ನ್ನು ನಿಯಂತ್ರಣ ಮುಕ್ತಗೊಳಿಸಲಾಗಿತ್ತು. ಎಲ್‌ಪಿಜಿ ಮತ್ತು ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನು ತೊಡೆದುಹಾಕಲು ಡೀಸೆಲ್ ಮಾರ್ಗವನ್ನೇ ಅನುಸರಿಸಲು ಸರಕಾರವು ಇತ್ತೀಚಿಗೆ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಗೃಹಬಳಕೆ ಅಡುಗೆ ಅನಿಲದ ಬೆಲೆಯನ್ನು ಪ್ರತಿ ತಿಂಗಳು ಸುಮಾರು ಎರಡು ರೂ.ಗಳಷ್ಟು ಹೆಚ್ಚಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News