ಮಾಜಿ ಮುಖ್ಯಮಂತ್ರಿಗಳಿಗೆ ಸರಕಾರಿ ನಿವಾಸದ ಹಕ್ಕಿಲ್ಲ: ಸುಪ್ರೀಂ ಕೋರ್ಟ್

Update: 2016-08-01 18:27 GMT

ಹೊಸದಿಲ್ಲಿ, ಆ.1: ಮಾಜಿ ಮುಖ್ಯಮಂತ್ರಿಗಳು ಯಾವುದೇ ಸರಕಾರಿ ವಸತಿ ಸೌಲಭ್ಯ ಪಡೆಯಲು ಅರ್ಹರಲ್ಲವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದರಿಂದ ಮಾಜಿ ಮುಖ್ಯಮಂತ್ರಿಗಳಿಗೆ ಹಿನ್ನಡೆಯಾಗಿದೆ.

ಮಾಜಿ ಮುಖ್ಯಮಂತ್ರಿಗಳು ಯಾರಾದರೂ ಸರಕಾರಿ ವಸತಿಗಳಲ್ಲಿದ್ದರೆ ಅವರು 2-3 ತಿಂಗಳೊಳಗೆ ಮನೆಗಳನ್ನು ತೆರವುಗೊಳಿಸಬೇಕು. ಅವರಿಗೆ ಜೀವಮಾನ ಪರ್ಯಂತ ಸರಕಾರಿ ವಸತಿಗೃಹಗಳಲ್ಲಿ ವಾಸಿಸುವ ಹಕ್ಕಿಲ್ಲವೆಂದು ನ್ಯಾಯಮೂರ್ತಿಗಳಾದ ಅನಿಲ್ ಆರ್. ದವೆ, ಯು.ಯು. ಲಲಿತ್ ಹಾಗೂ ಎಲ್. ನಾಗೇಶ್ವರ ರಾವ್ ಅವರನ್ನೊಳಗೊಂಡಿದ್ದ ಪೀಠವೊಂದು ಆದೇಶಿಸಿದೆ.

ಮಾಜಿ ಮುಖ್ಯಮಂತ್ರಿಗಳು ಹಾಗೂ ಇತರ ‘ಅನರ್ಹ’ ಸಂಘಟನೆಗಳಿಗೆ ಸರಕಾರಿ ಬಂಗಲೆಗಳ ಮಂಜೂರಾತಿಯ ವಿರುದ್ಧ ನಿರ್ದೇಶನ ನೀಡುವಂತೆ ಕೋರಿ ಉತ್ತರ ಪ್ರದೇಶದ ಸರಕಾರೇತರ ಸಂಘಟನೆ ಲೋಕಪ್ರಹಂ ದಾಖಲಿಸಿದ್ದ ಮನವಿಯ ಸಂಬಂಧ ನ್ಯಾಯಾಲಯ ಈ ತೀರ್ಪು ನೀಡಿದೆ.

ಅಲಹಾಬಾದ್ ಹೈಕೋರ್ಟ್‌ನ ನಿರ್ದೇಶನದ ಹೊರತಾಗಿಯೂ, ಉತ್ತರಪ್ರದೇಶ ಸರಕಾರವು ಮಾಜಿ ಮುಖ್ಯಮಂತ್ರಿಗಳಿಗೆ ಬಂಗಲೆಗಳನ್ನು ಮಂಜೂರು ಮಾಡುವುದಕ್ಕಾಗಿ ಮಾಜಿ ಮುಖ್ಯಮಂತ್ರಿಗಳ ನಿವಾಸ ಮಂಜೂರಾತಿ ನಿಯಮಗಳು-1997ನ್ನು(ಕಾಯ್ದೆ ಬದ್ಧವಲ್ಲದ) ರಚಿಸಿದೆಯೆಂದು ಎನ್‌ಜಿಒ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News