ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯ ಅಪಹರಿಸಿ ಅತ್ಯಾಚಾರ

Update: 2016-08-03 07:25 GMT

ಲಕ್ನೋ, ಆ.3: ಎರಡು ದಿನಗಳ ಹಿಂದೆ ಹೆದ್ದಾರಿಯ ಬದಿಯಲ್ಲಿ ಮಹಿಳೆ ಹಾಗೂ ಆಕೆಯ ಮಗಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಕಹಿ ಘಟನೆ ಮರೆಯುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ.

ಮಂಗಳವಾರ ಉತ್ತರ ಪ್ರದೇಶ ಬರೇಲಿಯಲ್ಲಿ ಶಿಕ್ಷಕಿಯೊಬ್ಬರನ್ನು ಅಪಹರಣ ಮಾಡಿರುವ ಮೂವರು ದುಷ್ಕರ್ಮಿಗಳ ತಂಡ ಆಕೆಯನ್ನು ಅತ್ಯಾಚಾರ ಮಾಡಿದ್ದಲ್ಲದೆ, ಕೃತ್ಯದ ಚಿತ್ರೀಕರಣವನ್ನು ಮಾಡಿದ್ದರು.

ಮಂಗಳವಾರ ಬೆಳಗ್ಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ ನನ್ನದೆರು ಕಾರೊಂದು ಬಂದು ನಿಂತಿತು. ಅದರಲ್ಲಿದ್ದ ಮೂವರು ಪುರುಷರು ತನ್ನನ್ನು ಕಾರಿನೊಳಗೆ ಸೆಳೆದುಕೊಂಡರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.

 ಚಲಿಸುವ ಕಾರಿನಲ್ಲೆ ಶಿಕ್ಷಕಿಯನ್ನು ರೇಪ್ ಮಾಡಿರುವ ದುಷ್ಕರ್ಮಿಗಳು ಹೆದ್ದಾರಿಯ ಸಮೀಪ ಎಸೆದು ಹೋಗಿದ್ದಾರೆ. ಘಟನೆಯ ಬಗ್ಗೆ ದೂರು ನೀಡಿದರೆ, ಮೊಬೈಲ್‌ನಲ್ಲಿರುವ ರೇಪ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ದುರುಳರು ಶಿಕ್ಷಕಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ನಾವು ಪ್ರಕರಣದ ತನಿಖೆ ನಡಸುತ್ತಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸವಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಶುಕ್ರವಾರ ಬುಲಂದ್‌ಶಹರ್‌ನ ಹೆದ್ದಾರಿಯ ಬದಿಯಲ್ಲಿ ನಡೆದ ಮಹಿಳೆ ಹಾಗೂ ಆಕೆಯ ಮಗಳ ಅತ್ಯಾಚಾರಕ್ಕೆ ಸಂಬಂಧಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಉತ್ತರ ಪ್ರದೇಶ ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News