ಝಾಕಿರ್ ನಾಯ್ಕ್ ರಿಗೆ ಉಗ್ರ ಸಂಘಟನೆಗಳ ಸಂಬಂಧ ಇಲ್ಲ : ಕೇಂದ್ರ ಸರಕಾರ

Update: 2016-08-03 08:15 GMT

ಹೊಸದಿಲ್ಲಿ, ಆ. 3: ಡಾ. ಝಾಕಿರ್ ನಾಯ್ಕ್ ಅವರ ಇಸ್ಲಾಮಿಕ್ ರಿಸರ್ಚ್ ಫ್ಯಾಉಂಡೇಷನ್ ಗೆ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಇಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಆದರೆ ಅವರ ಭಾಷಣದಿಂದ ಕೆಲವು ಉಗ್ರರು ಪ್ರೇರೇಪಣೆ ಪಡೆದಿದ್ದಾರೆ ಎಂದು ಹೇಳಲಾಗಿದೆ ಎಂದು ಅದು ಹೇಳಿದೆ. 

" ಈವರೆಗೆ ಅಂತಹ ಯಾವುದೇ ನಂಟು ಇರುವುದು ಕಂಡು ಬಂದಿಲ್ಲ. ಆದರೆ ಉಗ್ರರು ಅವರು ಭಾಷಣದಿಂದ ಪ್ರೇರೇಪಣೆ ಪಡೆದಿದ್ದಾರೆ ಎಂದು ಹೇಳಲಾಗಿದೆ " ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಹಂಸ್ ರಾಜ್ ಅಹಿರ್ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 

"ಪೀಸ್ ಟಿವಿ ಅನುಮತಿ ಪಡೆದಿರುವ ಸ್ಯಾಟಲೈಟ್ ಚಾನಲ್ ಅಲ್ಲ. ಹಾಗಾಗಿ ಅದನ್ನು ಕೇಬಲ್ ಆಪರೇಟರ್ ಗಳು ಪ್ರಸಾರ ಮಾಡುವಂತಿಲ್ಲ " ಎಂದೂ ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News