ಚೀನಾ ಗಡಿಯಲ್ಲಿ ಬ್ರಹ್ಮೋಸ್ ಕ್ಷಿಪಣಿ

Update: 2016-08-03 18:10 GMT

ಹೊಸದಿಲ್ಲಿ, ಆ.3: ಕಡಿದಾದ ಪ್ರದೇಶಗಳಲ್ಲೂ ಧುಮುಕುವ ಸಾಮರ್ಥ್ಯ ಹಾಗೂ 290ಕಿ.ಮೀ. ವ್ಯಾಪ್ತಿಯಿರುವ ಹೆಚ್ಚುವರಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಚೀನಾದೊಂದಿಗಿನ ಗಡಿಯ ಗುಂಟ ತನ್ನ ಸಾಮರ್ಥ್ಯ ವೃದ್ಧಿಗಾಗಿ, ಪೂರ್ವ ವಲಯದಲ್ಲಿ ನಿಯೋಜಿಸಲು ಸರಕಾರ ಅನುಮತಿ ನೀಡಿದೆ.

ರೂ. 4,300 ಕೋಟಿಗೂ ಹೆಚ್ಚು ವೆಚ್ಚದಲ್ಲಿ 4ನೆ ಬ್ರಹ್ಮೋಸ್ ರೆಜಿಮೆಂಟ್‌ಗೆ ಸರಕಾರ ಮಂಜೂರಾತಿ ನೀಡಿದೆಯೆಂದು ರಕ್ಷಣಾ ಮೂಲಗಳು ತಿಳಿಸಿವೆ.
ಈ ರೆಜಿಮೆಂಟ್‌ನಲ್ಲಿ ಸುಮಾರು 100 ಕ್ಷಿಪಣಿಗಳು, 12್ಡ12 ಹೆವಿಡ್ಯೂಟಿ ಟ್ರಕ್‌ಗಳ ಮೇಲೆ ಸಂಚಾರಿ ಉಡಾವಣೆಗಳು, ಒಂದು ಸಂಚಾರಿ ಕಮಾಂಡ್ ಪೋಸ್ಟ್ ಹಾಗೂ ಇತರ ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್‌ಗಳಿರ ಲಿವೆಯೆಂದು ಅವು ಹೇಳೀವೆ.
ಈ ಕಡಿದಾದ ಪ್ರದೇಶಗಳಲ್ಲಿ ದಾಳಿ ಮಾಡುವ ಕ್ಷಿಪಣಿಗಳು, ಪರ್ವತಗಳ ನೆರಳಲ್ಲಿ ಅಡಗಿರುವ ವೈರಿ ಗುರಿಗಳನ್ನು ಭೇದಿಸಬಲ್ಲುದಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News