ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಶೇ 10ರಷ್ಟು ಮೀಸಲಾತಿ; ಗುಜರಾತ್‌ ಸರಕಾರದ ಸುಗ್ರೀವಾಜ್ಞೆ ರದ್ದುಗೊಳಿಸಿದ ಹೈಕೋರ್ಟ್‌

Update: 2016-08-04 12:39 GMT

ಅಹ್ಮದಾಬಾದ್‌, ಆ.4: ಆರ್ಥಿಕವಾಗಿ ದುರ್ಬಲ ವರ್ಗದವರಿಗೆ   ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ಕಲ್ಪಿಸುವ ಗುಜರಾತ್‌ ಸರಕಾರದ ಸುಗ್ರೀವಾಜ್ಞೆಯನ್ನು  ಇಂದು ಗುಜರಾತ್‌ ಹೈಕೋರ್ಟ್‌  ರದ್ದುಗೊಳಿಸಿದೆ.

 ಕೋರ್ಟ್‌‌ನ ಮಾರ್ಗಸೂಚಿಯಂತೆ ಗುಜರಾತ್‌ ಸರಕಾರದ ಈ  ನಿರ್ಧಾರ  ಅಸಂವಿಧಾನಿಕ ಮತ್ತು ಕಾನೂನುಬಾಹಿರವಾಗಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. 
ಮೀಸಲಾತಿಗೆ ಆಗ್ರಹಿಸಿ ಗುಜರಾತ್‌ನ ಪಾಟೀದಾರ್‌ ಸಮುದಾಯವು ಚಳುವಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸರಕಾರ  ಆರ್ಥಿಕವಾಗಿ  ದುರ್ಬಲ ವರ್ಗದವರಿಗೆ  ಶೇ 10ರಷ್ಟು ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ  ಗುಜರಾತ್‌ ಸರಕಾರ  ಸುಗ್ರೀವಾಜ್ಞೆ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News