ಪ್ರೊ.ಸಮೀನ್ ಫಾತಿಮಾ ಓಸ್ಮಾನಿಯಾ ವಿವಿ ಇಂಜಿನಿಯರಿಂಗ್ ಕಾಲೇಜಿನ ಪ್ರಪ್ರಥಮ ಮಹಿಳಾ ಪ್ರಾಂಶುಪಾಲೆ

Update: 2016-08-05 08:38 GMT

ಹೈದರಾಬಾದ್ , ಆ.5: ಪ್ರತಿಷ್ಠಿತ ಓಸ್ಮಾನಿಯಾ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜಿನ ಪ್ರಪ್ರಥಮ ಮಹಿಳಾ ಪ್ರಾಂಶುಪಾಲೆಯಾಗಿ ಪ್ರೊಫೆಸರ್ ಸಮೀನ್ ಫಾತಿಮಾ ಇತ್ತೀಚಿಗೆ ಅಧಿಕಾರ ಸ್ವೀಕರಿಸಿದರು. ಪ್ರೊ. ರಾಮಚಂದ್ರ ಅವರು ಪ್ರೊ . ಸಮೀನ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾಲೇಜಿನ 90 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿ ಮಹಿಳೆಯೊಬ್ಬರು ಪ್ರಾಂಶುಪಾಲರಾಗಿದ್ದಾರೆ. 

ಎಂಎಸ್ ಹಾಗು ಪಿಎಚ್ ಡಿ ಮಾಡಿರುವ ಪ್ರೊ.ಸಮೀನ್ ಇದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News