ಒಲಿಂಪಿಕ್ಸ್ : ಪ್ರಾರಂಭಕ್ಕೆ ಮುನ್ನವೇ ವೇಗದ ವಿಶ್ವ ದಾಖಲೆ ಮುರಿದ ಕಳ್ಳರು !

Update: 2016-08-06 06:29 GMT

ರಿಯೋ, ಆ.6: ಐತಿಹಾಸಿಕ ರಿಯೋ ಒಲಿಂಪಿಕ್ಸ್ ಪ್ರಾರಂಭಕ್ಕೆ ಮುನ್ನವೇ ಒಲಿಂಪಿಕ್ ಫೋಟೋಗ್ರಾಫರ್ ಒಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರಣವೇನು ಗೊತ್ತೇ ? ನ್ಯೂಸ್ ಕಾರ್ಪ್ ಫೋಟೊಗ್ರಾಫರ್ ಬ್ರೆಟ್ಟ್ ಕೊಸ್ಟೆಲ್ಲೋ ಅವರ 40,000 ಡಾಲರ್ ಬೆಲೆಬಾಳುವ ಕ್ಯಾಮರಾ ಗೇರ್ ಅನ್ನು ಕಳ್ಳರು ಕೇವಲ ಹತ್ತೇ ಸೆಕೆಂಡುಗಳಲ್ಲಿ ಜನನಿಬಿಡ ಕೆಫೆಯೊಂದರಲ್ಲಿ ಸೆಳೆದು ಪರಾರಿಯಾಗಿದ್ದಾರೆ.

ಅವರ ಮಾತಿನಲ್ಲೇ ಹೇಳುವುದಾದರೆ, ಅವರು ಕಾಫಿ ಶಾಪ್‌ನಲ್ಲಿರುವಾಗ ಅವರ ಬಳಿ ಬಂದ ಯುವತಿಯೊಬ್ಬಳು ಸಹಾಯ ಯಾಚಿಸಿದ್ದಳು. ಆಕೆಯೊಂದಿಗೆ ಅವರು ಕೇವಲ 10 ಸೆಕೆಂಡ್ ಮಾತನಾಡಿರಬಹುದಷ್ಟೇ, ಅಷ್ಟರೊಳಗಾಗಿ ಅವರ ಕ್ಯಾಮರಾ ಬ್ಯಾಗನ್ನು ಯಾರೋ ಸೆಳೆದಿದ್ದರು. ನಂತರ ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಕಳ್ಳರು ಹತ್ತಿರದಲ್ಲೇ ನಿಂತಿದ್ದ ಕಾರೊಂದರಲ್ಲಿ ಪರಾರಿಯಾಗಿದ್ದರು.

ಪೊಲೀಸರಿಗೆ ಮಾಹಿತಿ ನೀಡಿದ್ದರೂ ತಮ್ಮ ಕಳ್ಳತನವಾದ ಕ್ಯಾಮರಾ ಗೇರ್ ಮತ್ತೆ ತಮಗೆ ಸಿಗಬಹುದೆಂಬ ಆಶಾವಾದ ಕೊಸ್ಟೆಲ್ಲೋ ಅವರಿಗಿಲ್ಲವಾಗಿದೆ.
‘‘ಕಳ್ಳರ ಸಂಚು ಅರ್ಥವಾಗದೇ ಹೋಗಿದ್ದು ನನ್ನ ಮೂರ್ಖತನ. ನನ್ನ ಬ್ಯಾಗ್ ಹಾಗೂ ಗೇರ್ ಮತ್ತೆಂದೂ ನನಗೆ ಸಿಗದು ಎಂದು ನನಗೆ ತಿಳಿದಿದೆ’’ಎಂದು ಹೇಳುತ್ತಾರೆ ಅವರು.

ಸದಾ ಜಾಗೃತರಾಗಿರದ ಹೊರತು ಕೊಸ್ಟೆಲ್ಲೋ ಅವರಿಗಾದಂತೆ ಬೇರೆಯವರಿಗೂ ರಿಯೋದಲ್ಲಿ ಆಗಬಹುದೆಂದು ಈ ಘಟನೆಯಿಂದ ತಿಳಿದು ಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News