ಭಾರತ ಅಸಹಿಷ್ಣುದೇಶ,ಹಿಂದೂ ಧರ್ಮದ ಮಾತಾಡಿದರೆ ಆರೆಸ್ಸೆಸ್ ಲೇಬಲ್ ! : ‘ಮಹಾಭಾರತದ ಶ್ರೀಕೃಷ್ಣ’ ನಿತೀಶ್

Update: 2016-08-06 10:29 GMT

ಮುಂಬೈ, ಆ.6: ಭಾರತದ ಪ್ರೇಕ್ಷಕರಲ್ಲಿ ಮಹಾಭಾರತ ಖ್ಯಾತಿಯ ಶ್ರೀಕೃಷ್ಣ ಪಾತ್ರಧಾರಿಯಾಗಿ ಪ್ರಸಿದ್ಧರಾದ ನಿತೀಶ್ ಭಾರದ್ವಾಜ್ ಭಾರತವನ್ನು ಅಸಹಿಷ್ಣು ದೇಶವೆಂದು ಹೇಳಿದ್ದಾರೆ.ಇಂಡಿಯನ್ ಎಕ್ಸ್‌ಪ್ರೆಸ್ ಎಕ್ಸಿಕ್ಲೂಸಿವ್ ಮಾತುಕತೆಯಲ್ಲಿ ನಿತೀಶ್ ತನ್ನ ಸಿನೆಮಾದ ಕುರಿತು ಮಾತಾಡುತ್ತಾ ಭಾರತವನ್ನು ಅಸಹಿಷ್ಣು ದೇಶ"ವೆಂದು ಹೇಳಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಧರ್ಮದ ಬಗ್ಗೆ ಮಾತಾಡಿದರೆ ನನ್ನ ಮೇಲೆ ಆರೆಸ್ಸೆಸ್ ಲೇಬಲ್ ಅಂಟುತ್ತದೆ" ಎಂದೂ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

  ನಿತೀಶ್‌ರನ್ನು "ಮಹಾಭಾರತದಲ್ಲಿ ಅಷ್ಟು ಖ್ಯಾತಿಪಡೆದಿದ್ದರೂ ತಮ್ಮ ಜನಪ್ರಿಯತೆಯ ಲಾಭವನ್ನು ಎತ್ತಿಕೊಳ್ಳಲು ನಿಮ್ಮಿಂದ ಸಾಧ್ಯವಾಗಲಿಲ್ಲ. ಬಹಳ ಕಡಿಮೆ ಸಿನೆಮಾ ಮಾಡಿದ್ದೀರಿ" ಎಂದು ಪ್ರಶ್ನಿಸಿದಕ್ಕೆ ಉತ್ತರವಾಗಿ "ನಾನುನನ್ನ ಜನಪ್ರಿಯತೆಯಿಂದ ಲಾಭವೆತ್ತಿಕೊಳ್ಳಲುವಿಫಲನಾಗಿದ್ದೇನೆ. ತಪ್ಪು ಸಮಯದಲ್ಲಿ ನಾನು ಲಂಡನ್‌ಗೆ ಹೋಗಲು ನಿರ್ಧರಿಸಿದೆ." ಎಂದು ಹೇಳಿದ್ದಾರೆ. ಮಾಧುರಿ ದೀಕ್ಷಿತ್ ಜೊತೆ "ನಗೀನಾ ಗಲಿಗಲಿ" ಸಿನೆಮಾ ಮಾಡಿದ್ದೇನೆ. ಒಂದು ಮಳೆಯಾಲಂ ಸಿನೆಮಾದಲ್ಲಿ ನಟಿಸಿದ್ದೇನೆ. ಅಲ್ಲಿಯವರೆಗೂ ತಾನು ಪರಿಚಿತನಾಗಿಯೇ ಇದ್ದೆ" ಎಂದು ನಿತೀಶ್ ಹೇಳಿದ್ದಾರೆ. "ನಾನು ಜೀವನದಲ್ಲಿ ಏನನ್ನು ಗಳಿಸಿದ್ದೇನೆ ಎಂದು ಅವಲೋಕನ ನಡೆಸುವವನು. ಆಸಮಯದಲ್ಲಿ ನನಗೆ ಇಂಗ್ಲೆಂಡ್‌ನ ಥಿಯೇಟರ್ ಮತ್ತು ರೇಡಿಯೊದ ಬೇರೆಯೇ ಜಗತ್ತು ಕಾಣಿಸಿಕೊಂಡಿತ್ತು. ಆಗ ಭಾರತ ಕ್ಲೋಸ್ಡ್ ವಿಂಡೋ ಆಗಿತ್ತು. ನಾನು ಒಂದು ಮುಕ್ತ ಚಿಂತನೆಯ,ಪ್ರಜಾಪ್ರಭುತ್ವವಾದಿ ಚಿಂತನೆಗಳಿರುವ ಹಾಗೂ ಸಹಿಷ್ಣು ಸಮಾಜಕ್ಕೆ ಹೋಗಲು ಬಯಸಿದ್ದೆ. ಈವತ್ತಿಗೂಇಲ್ಲಿ ನಾವೂ ಈ ರೀತಿ ಇಲ್ಲ" ಎಂದು ನಿತೀಶ್ ಹೇಳಿದ್ದಾರೆಂದು ವರದಿ ತಿಳಿಸಿದೆ.

    ನೀವುಭಾರತವನ್ನು ಅಸಹಿಷ್ಣು ದೇಶ ಎನ್ನಲು ಬಯಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಿತೀಶ್ "ಭಾರತ ಈಗ ಅಸಹಿಷ್ಣುದೇಶವಾಗಿದೆ. ಒಂದು ವೇಳೆ ಶಾಸ್ತ್ರದಿಂದ ಒಂದು ವಿಚಾರವನ್ನು ಹೇಳಿದರೆ ನನ್ನನ್ನು ಆರೆಸ್ಸೆಸ್‌ನ ವ್ಯಕ್ತಿ ಎನ್ನಲಾಗುತ್ತದೆ. ಮಾಧ್ಯಮಗಳು ಮತ್ತು ಜನರು,ಪ್ರತಿಯೊಂದು ವಿಷಯದಲ್ಲಿ ಆರೆಸ್ಸೆಸ್‌ನ್ನು ಎಳೆದು ತರುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ. "ಈ ದೇಶದಲ್ಲಿ ಮುಕ್ತ ಚರ್ಚೆ ನಡೆಯದಂತಹ ವಾತಾವರಣ ಇದೆ. ಉದಾಹರಣೆಯೆಂದರೆ ಎನ್‌ಸಿಆರ್‌ಟಿ ಬುಕ್ಸ್ ಬಗ್ಗೆ ಚರ್ಚೆ ಆಗುತ್ತಿದೆ.ಶಾಲೆಗಳಲ್ಲಿ ಕಲಿಸಲಾಗುತ್ತಿರುವ ಪುಸ್ತಕಗಳೆಲ್ಲವೂ ಕಳೆದ ಎಪ್ಪತ್ತು ವರ್ಷಗಳಿಂದ ಎಡಪಂಥೀಯರು ಮತ್ತುಪ್ರೋ-ಕಾಂಗ್ರೆಸ್ ಇತಿಹಾಸಕಾರರು ಬರೆದದ್ದಾಗಿದೆ. ನೀವು ಮಕ್ಕಳಿಗೆ ವಿಭಿನ್ನ ವಿಚಾರಗಳನ್ನು ತಿಳಿಸಿಕೊಡಬೇಕಾಗಿದೆ. ಮತ್ತು ಯಾವುದು ಸರಿಯಾದದ್ದು ಯಾವುದು ತಪ್ಪಾದದ್ದು ಎಂದು ಯೋಚಿಸಲುಮಕ್ಕಳನ್ನು ಬಿಡಬೇಕು. ಅವರ ಗಂಟಲಿನೊಳಕ್ಕೆ ಒಂದೇ ರೀತಿಯ ವಿಚಾರಗಳನ್ನು ತುರಕಬಾರದು" ಎಂದು ನಿತೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯಾರು ನಿಮ್ಮನ್ನು ಆರೆಸ್ಸೆಸ್‌ನ ವ್ಯಕ್ತಿ ಎಂದು ಹೇಳುತ್ತಾರೆ ಎಂಬ ಪ್ರಶ್ನೆಗೆ ನಿತೀಶ್ " ಮಾಧ್ಯಮಗಳುಮತ್ತು ಸಮಾಜದಲ್ಲಿರುವ ತಥಾಕಥಿತ ಉದಾರವಾದಿ ಮತ್ತು ಬುದ್ಧಿಜೀವಿಗಳು" ಎಂದು ಉತ್ತರಿಸಿದ್ದಾರೆ. ತುಂಬಕಾಲದಿಂದ ಅಸಹಿಷ್ಣುತೆಯ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಲಿದೆ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದುಎಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News