ಸೆ.29ರಂದು ಸ್ಪೆಕ್ಟ್ರಂ ಹರಾಜು: 5.63 ಲಕ್ಷ ಕೋಟಿ ರೂ. ಆದಾಯ ನಿರೀಕ್ಷೆ

Update: 2016-08-08 18:16 GMT

   ಹೊಸದಿಲ್ಲಿ, ಆ.8: ದೇಶದ ಅತಿ ದೊಡ್ಡ ಟೆಲಿಕಾಂ ತರಂಗಗುಚ್ಛದ ಹರಾಜು, ಸೆಪ್ಟಂಬರ್ 29ರಿಂದ ಆರಂಭಗೊಳ್ಳಲಿದ್ದು, ಸುಮಾರು 5.63 ಲಕ್ಷ ಕೋಟಿ ರೂ.ಗೂ ಅಧಿಕ ವೌಲ್ಯದ ಮೊಬೈಲ್ ತರಂಗಾಂತರಗಳನ್ನು, ಮೂಲದರದಲ್ಲಿ ಕೇಂದ್ರ ಸರಕಾರ ಮಾರಾಟಕ್ಕಿಡಲಿದೆ.

  
700 ಎಂಎಚ್‌ಝಡ್,800 ಎಂಎಚ್‌ಝಡ್, 900 ಎಂಎಚ್‌ಝಡ್, 1800 ಎಂಎಚ್‌ಝಡ್ ಹಾಗೂ 2300 ಎಂಎಚ್‌ಝಡ್ ಬ್ಯಾಂಡ್ ಒಳಗೊಂಡಂತೆ ಒಟ್ಟು 2354 ಮೆಗಾಹರ್ಟ್ಝ್‌ನ ಮೊಬೈಲ್ ತರಂಗಾಂತರಗಳನ್ನು ಕೇಂದ್ರ ಸರಕಾರ ಹರಾಜಿಗಿಡಲಿದೆ. ಹರಾಜಿಗಿಡಲಾಗುವ ಎಲ್ಲಾ ತರಂಗಾಂತರಗಳನ್ನು, ಭಾರೀ ವೇಗದ 4ಜಿ ಮೊಬೈಲ್ ಸೇವೆಗಳಿಗಾಗಿ ಬಳಸಿಕೊಳ್ಳಬಹುದಾಗಿದೆ.
  ಪ್ರಸಕ್ತ ಹಣಕಾಸು ವರ್ಷದಲ್ಲಿ ತರಂಗಗುಚ್ಛಗಳ ಹರಾಜಿನಿಂದ ಕೇಂದ್ರ ಸರಕಾರ ಕನಿಷ್ಠ 64 ಸಾವಿರ ಕೋಟಿ ರೂ. ಹಾಗೂ ವಿವಿಧ ತೆರಿಗೆಗಳು ಹಾಗೂ ಸೇವೆಗಳಿಂದ ಅದಕ್ಕೆ 98,995 ಕೋಟಿ ರೂ. ಆದಾಯ ಸಂಗ್ರಹಿಸುವ ನಿರೀಕ್ಷೆಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News