ಮಾಜಿ 'ರಾ' ಅಧಿಕಾರಿ ಈಗ ರೈತ!

Update: 2016-08-09 10:27 GMT

ಪೂಚ್ಚಕ್ಕಾಲ್, ಆ.9: ಮಾಜಿ ಡಿಜಿಪಿ, ‘ರಾ’ದ ಮಾಜಿ ಮುಖ್ಯಸ್ಥ ಹರ್ಮಿಸ್ ತರಕನ್ ರೈತನಾಗಿ ಮತ್ತೆ ಪ್ರಸಿದ್ಧಿಗೆ ಬಂದಿದ್ದಾರೆ.ಹುಟ್ಟಿದೂರಿನಲ್ಲಿ ರೈತನಾಗಿ ಈಗ ಪ್ರವರ್ಧಮಾನಕ್ಕೆ ಬಂದಿದ್ದಾರೆ. ಮೂಲಕೃಷಿಕುಟುಂಬದಿಂದ ಬಂದಿದ್ದ ತರಕನ್‌ರು 2003ರಲ್ಲಿ ಡಿಜಿಪಿಯಾಗಿದ್ದರು. 2005ರ ನಂತರ ’ರಾ’ಮುಖ್ಯಸ್ಥನಾಗಿ ನೇಮಕಗೊಂಡರು. 2007ರಲ್ಲಿ ಸೇವೆಯಿಂದ ನಿವೃತ್ತರಾದ ಬಳಿಕ ಕರ್ನಾಟಕ ರಾಜ್ಯಪಾಲರ ಸಲಹೆಗಾರನಾಗಿ ಸೇವೆ ಸಲ್ಲಿಸಿದ್ದಾರೆ. ಭತ್ತ ಕೃಷಿ, ಮೀನು ಕೃಷಿಯನ್ನು ತನ್ನ ಹದಿನೈದು ಎಕರೆ ಪ್ರದೇಶದಲ್ಲಿ ಕೃಷಿ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

 ತೆಕ್ಕಾಟ್ಟುಶ್ಶೇರಿ ಪಂಚಾಯತ್ ವ್ಯಾಪ್ತಿಯ ಉಳ್ಳವೆಪ್ಪ್ ಗ್ರಾಮದಲ್ಲಿ ಅವರ ಕೃಷಿ ಸ್ಥಳವಿದೆ. ಜಲಕೃಷಿ ಅಭಿವೃದ್ಧಿ ಸಂಸ್ಥೆ ಅಡಾಕ್ ಜಾರಿಗೆ ತಂದ, ಭತ್ತ ಹಾಗೂ ಮೀನುಸಾಕಣೆ ಯೋಜನೆ ಪ್ರಕಾರ ಮೀನು ಸಾಕಣೆಯನ್ನು ಅವರು ಆರಂಭಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News