ಕಾಶ್ಮೀರದಲ್ಲಿ ಶಾಂತಿ ಪುನಃಸ್ಥಾಪನೆ

Update: 2016-08-12 18:46 GMT

ಹೊಸದಿಲ್ಲಿ, ಆ.12: ಕಾಶ್ಮೀರದಲ್ಲಿ ಹಿಂಸಾಚಾರ ಹಾಗೂ ಸಾವು-ನೋವುಗಳ ಕುರಿತು ಗಂಭೀರ ಆಕ್ರೋಶ ಹಾಗೂ ಕಳವಳ ವ್ಯಕ್ತಪಡಿಸಿದ ಲೋಕಸಭೆ, ಕಣಿವೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಮರುಸ್ಥಾಪನೆಗೆ ತುರ್ತು ಕ್ರಮಗಳಿಗಾಗಿ ಮನವಿ ಮಾಡಿದ್ದು, ದೇಶದ ಸಮಗ್ರತೆ ಹಾಗೂ ಭದ್ರತೆಯ ಕುರಿತು ಯಾವುದೇ ರಾಜಿಯಿಲ್ಲವೆಂದು ಶುಕ್ರವಾರ ಒತ್ತಿ ಹೇಳಿದೆ.

ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಓದಿ ಹೇಳಿದ ನಿರ್ಣಯವು, ಸಾರ್ವತ್ರಿಕವಾಗಿ ಜನರಿಗೆ ಹಾಗೂ ನಿರ್ದಿಷ್ಟವಾಗಿ ಯುವಕರಿಗೆ ವಿಶ್ವಾಸವನ್ನು ತುಂಬುವಂತೆ ಜಮ್ಮು-ಕಾಶ್ಮೀರದ ಸಮಾಜದ ಎಲ್ಲ ವರ್ಗಗಳಿಗೆ ಮನವಿ ಮಾಡಿದೆ.
ಸದನವು, ದೇಶದ ಭದ್ರತೆ, ಏಕತೆ ಹಾಗೂ ಸಮಗ್ರತೆಗಳ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲವೆಂದು ದೃಢಪಡಿಸುತ್ತದೆ. ಜನರ ಸಂಕಷ್ಟ ಪರಿಹಾರಕ್ಕೆ ಶಿಸ್ತು ಹಾಗೂ ಶಾಂತಿ ಕಾಪಾಡಲು ತುರ್ತು ಕ್ರಮ ಕೈಗೊಳ್ಳುವ ಅಗತ್ಯವೂ ಅಷ್ಟೇ ಇದೆಯೆಂದು ನಿರ್ಣಯ ಹೇಳಿದೆ.
ಈ ನಿರ್ಣಯ ಕೈಗೊಳ್ಳುವ ವೇಳೆ ಪ್ರಧಾನಿ ನರೇಂದ್ರ ಮೋದಿಯವರೂ ಸದನದಲ್ಲಿದ್ದರು. ಸಂಸತ್ತಿನ ಮುಂಗಾರು ಅಧಿವೇಶನದ ಅನಿರ್ದಿಷ್ಟಾವಧಿ ಮುಂದೂಡಿಕೆಯನ್ನು ಲೋಕಸಭಾಧ್ಯಕ್ಷೆ ಘೋಷಿಸುವ ಸ್ವಲ್ಪ ಮೊದಲು ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News