ಬುಲಂದ್ ಶಹರ್ ಸಾಮೂಹಿಕ ಅತ್ಯಾಚಾರ ಪ್ರಕರಣ : ಸಚಿವ ಅಝಂ ಖಾನ್ ವಿರುದ್ಧ ಸಂತ್ರಸ್ತೆಯಿಂದ ಸುಪ್ರೀಂ ಕೋರ್ಟ್‌ಗೆ ದೂರು

Update: 2016-08-13 09:02 GMT

ಹೊಸದಿಲ್ಲಿ, ಆ.13:ಉತ್ತರ ಪ್ರದೇಶ  ಸಚಿವ ಅಝಂ  ಖಾನ್ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಕೋರಿ ಬುಲಂದ್ ಶಹರ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪ್ರಾಪ್ತ ಸಂತ್ರಸ್ತೆಯೊಬ್ಬರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾಳೆ.
ಬುಲಂದಶಹರ್ ಘಟನೆಯಲ್ಲಿ  ವಿಪಕ್ಷಗಳ ರಾಜಕೀಯ ಕೈವಾಡ ಇದೆ ಎಂದು ಹೇಳಿಕೆ ನೀಡುವ ಮೂಲಕ ಸಚಿವ ಖಾನ್ ಭಾರಿ ವಿವಾದವನ್ನುಂಟು ಮಾಡಿದ್ದರು.
ಈ ಸಂಬಂಧ ಸುಪ್ರೀಂಕೋರ್ಟಿನಲ್ಲಿ ಮನವಿ ಸಲ್ಲಿಸಿರುವ ಆಕೆ ಪ್ರಕರಣವನ್ನು ಹೊಸದಿಲ್ಲಿಗೆ ವರ್ಗಾಯಿಸಬೇಕು ಹಾಗೂ ನ್ಯಾಯಾಲಯದ ನಿಗಾದಲ್ಲಿ ತನಿಖೆಯಾಗಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿರುವ ಆಕೆ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಲ್ಲರಿಗೂ ಮರುವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾಳೆ.
ಬುಲಂದ ಶಹರ್​ನಲ್ಲಿ ದರೋಡೆಕೋರರ ತಂಡವೊಂದು ವಾಹನವೊಂದನ್ನು ಅಡ್ಡಗಟ್ಟಿ  ವಾಹನದಲ್ಲಿ ಪ್ರಯಾಣಿಸುತ್ತಿದ್ದ  ತಾಯಿ ಮತ್ತು ಮಗಳನ್ನು ಹೊರಕ್ಕೆ ಎಳೆದುಕೊಂಡು, ಅವರ ಮೇಲೆ  ಸಾಮೂಹಿಕ ಅತ್ಯಾಚಾರ ನಡೆಸಿ ಅವರ ಬಳಿ ಇದ್ದ ನಗನಗದನ್ನು ದೋಚಲಾಗಿತ್ತು. 
ಅಲಹಾಬಾದ್ ಹೈಕೋರ್ಟ್  ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರಕಾರಕ್ಕೆ  ಆದೇಶ ನೀಡಿತ್ತು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News