ಪಾಕ್ ಧ್ವಜ ಹಾರಿಸಿದ ‘ ಮಾನಸಿಕ ಅಸ್ವಸ್ಥ’

Update: 2016-08-16 17:38 GMT
ಸಾಂದರ್ಭಿಕ ಚಿತ್ರ

ಜೈಪುರ, ಆ.16: ಸ್ವಾತಂತ್ರ ದಿನಾಚರಣೆಯ ಸಂದರ್ಭ ತನ್ನ ಮನೆಯ ಛಾವಣಿ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ‘ಮಾನಸಿಕ ಅಸ್ವಸ್ಥ’ನೋರ್ವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಇಲ್ಲಿನ ಮಾನಸಸರೋವರ್ ಪ್ರದೇಶದಲ್ಲಿ ಸಂಭವಿಸಿದೆ.

ಪಾಕ್ ಧ್ವಜ ಹಾರಿಸಿದ ವ್ಯಕ್ತಿಯನ್ನು ಕಪಿಲ್ ಶಾಸ್ತ್ರಿ ಎಂದು ಗುರುತಿಸಲಾಗಿದ್ದು, ಈತ ‘ಮಾನಸಿಕ ಅಸ್ವಸ್ಥ’ ಎನ್ನಲಾಗಿದೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News