ಅಗತ್ಯವಾದರೆ ಜಮ್ಮು-ಕಾಶ್ಮೀರ ಪುನರ್ವಸತಿ ಕಾನೂನು ಸಂವಿಧಾನ ಪೀಠಕ್ಕೆ: ಸುಪ್ರೀಂ

Update: 2016-08-16 18:32 GMT

ಹೊಸದಿಲ್ಲಿ,ಆ.16: ಕೆಲವು ವಿಷಯಗಳಲ್ಲಿ ಸಂವಿಧಾನದ ವ್ಯಾಖ್ಯಾನ ಅಗತ್ಯವಾಗಿದೆ ಎಂದು ತನಗೆ ಅನಿಸಿದರೆ ಜಮ್ಮು-ಕಾಶ್ಮೀರ ಪುನರ್ವಸತಿ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಯನ್ನು ತಾನು ಸಂವಿಧಾನಕ್ಕೆ ಪೀಠಕ್ಕೆ ಒಪ್ಪಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹೇಳಿತು.

ಭಾರತದ ವಿಭಜನೆಯ ನಂತರ 1947 ರಿಂದ 1954ರ ನಡುವೆ ಜಮ್ಮು-ಕಾಶ್ಮೀರದಿಂದ ವಲಸೆ ಹೋಗಿದ್ದ ಪಾಕಿಸ್ತಾನಿ ಪ್ರಜೆಗಳ ಪುನರ್ವಸತಿಗೆ ಅನುಮತಿ ನೀಡಿಕೆಯು ಈ ಕಾನೂನಿನ ವ್ಯಾಪ್ತಿಗೊಳಪಡುತ್ತದೆ.

ತಾನು ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತೇನೆ ಮತ್ತು ವಿಚಾರಣೆ ಸಂದರ್ಭದಲ್ಲಿ ಯಾವುದೇ ಸಾಂವಿಧಾನಿಕ ವಿಷಯ ಇದರಲ್ಲಿ ಒಳಗೊಂಡಿಲ್ಲ ಎನ್ನುವುದು ಕಂಡುಬಂದರೆ ಆದೇಶವೊಂದನ್ನು ಹೊರಡಿಸುವುದಾಗಿ ನ್ಯಾ.ರಂಜನ್ ಗೊಗೊಯ್ ನೇತೃತ್ವದ ಪೀಠವು ಹೇಳಿತು.

1947ರಿಂದ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದ ಜಮ್ಮು-ಕಾಶ್ಮೀರದ ನಿವಾಸಿಗಳನ್ನು ಅವರ ವಾಪಸಾತಿಗಾಗಿ ಪರಿಗಣಿಸಬಹುದು,ಆದರೆ ಅವರ ಸಂತತಿಯನ್ನಲ್ಲ ಎಂದು ಅರ್ಜಿದಾರರಾದ ಜಮ್ಮು-ಕಾಶ್ಮೀರ ನ್ಯಾಷನಲ್ ಪ್ಯಾಂಥರ್ ಪಾರ್ಟಿಯ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಭೀಮ್ ಸಿಂಗ್ ಅವರು ಆಕ್ಷೇಪಿಸಿದ್ದಾರೆ. ವಿಧಾನಸಭೆಯು ಅಂಗೀಕರಿಸಿರುವ ಈ ಕಾನೂನು ಕರಾಳ,ಅಸಾಂವಿಧಾನಿಕ ಮತ್ತು ಅಸಮಂಜಸವಾಗಿದ್ದು,ರಾಜ್ಯದ ಭದ್ರತೆಗೆ ಬೆದರಿಕೆಯೊಡ್ಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News