ತಿರಂಗ ಯಾತ್ರೆಯ ಬೈಕ್ ರ‍್ಯಾಲಿಯಲ್ಲಿ ಹೆಲ್ಮೆಟ್ ಧರಿಸದ ಕೇಂದ್ರ ಸಚಿವದ್ವಯರು

Update: 2016-08-17 06:55 GMT

ಹೊಸದಿಲ್ಲಿ, ಆ.17: ದೇಶಾದ್ಯಂತ ಬಿಜೆಪಿ ಕೈಗೊಂಡಿರುವ ತ್ರಿರಂಗ ಯಾತ್ರೆಯ ಬೈಕ್ ರ‍್ಯಾಲಿಯಲ್ಲಿ ಕೇಂದ್ರ ಸಚಿವರಿಬ್ಬರು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ವಿವಾದವನ್ನುಂಟು ಮಾಡಿದ್ದಾರೆ.
ಖಟಿಪುರದಿಂದ ಧನಕ್ಯ ತನಕ ನಡೆದ ತ್ರಿರಂಗ ಯಾತ್ರೆಯ ಬೈಕ್ ರ್ಯಾಲಿಯಲ್ಲಿ ಕೇಂದ್ರ ಸಚಿವರಾದ ರಾಜ್ಯವರ್ಧ ರಾಥೋರ್ ಮತ್ತು ಪಿಯೂಷ್ ಗೋಯಲ್ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುವ ಮೂಲಕ ಟ್ರಾಫಿಕ್ ನಿಯಮವನ್ನು ಗಾಳಿಗೆ ತೂರಿದ್ದಾರೆ.
ಬೈಕ್ ರ‍್ಯಾಲಿಯಲ್ಲಿ ಬೈಕ್‌ನ್ನು ಸಚಿವ ರಾಜ್ಯವರ್ಧನ ರಾಥೋರ್ ಚಲಾಯಿಸಿದರೆ, ಪಿಲನ್ ರೈಡರಾಗಿ ಸಚಿವ ಪಿಯೂಷ್ ಗೋಯಲ್ ಇದ್ದರು. ಇವರು ಬೈಕ್‌ನಲ್ಲಿ ತೆರಳುವಾಗ ಹೆಲ್ಮೆಟ್ ಧರಿಸಿರಲಿಲ್ಲ. ತಲೆಗೆ ಟರ್ಬನ್ ಧರಿಸಿದ್ದರು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವುದು ಕಾನೂನು ಬಾಹಿರವಾಗಿದ್ದರೂ ಸಚಿವರಿಗೆ ಈ ನಿಯಮ ಗೊತ್ತಿಲ್ಲ !
ಪ್ರಕಾರ ಟರ್ಬನ್ ಧರಿಸಿ ದ್ವಿಚಕ್ರ ಚಲಾಯಿಸುವುದು ಕಾನೂನು ಬಾಹಿರವಲ್ಲ ಎಂದು ಸ್ಥಳೀಯ ಬಿಜೆಪಿ ನಾಯಕರು ಸ್ಪಷ್ಟನೆ ನೀಡಿದ್ದಾರೆ. ಆದರೆ ಹೆಲ್ಮೆಟ್ ಧರಿಸದೆ ದ್ವಿಚಕ್ರ ಚಲಾಯಿಸಿದಕ್ಕೆ ಇವರು 200 ರೂ. ದಂಡ ಪಾವತಿಸಬೇಕಾಗಿದೆ. ಪೊಲೀಸರು ಕೇಂದ್ರ ಸಚಿವರು ಎನ್ನುವ ಕಾರಣಕ್ಕಾಗಿ ಅವರಿಗೆ ರಿಯಾಯತಿ ತೋರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಸಚಿವದ್ವಯರು ಹೆಲ್ಮೆಟ್‌ರಹಿತವಾಗಿ ದ್ವಿಚಕ್ರ ಚಲಾಯಿಸಿರುವುದನ್ನು ನೋಡಿಲ್ಲ ಎಂದು ಸ್ಥಳೀಯ ಪೊಲೀಸರು ಹೇಳುತ್ತಾರೆ. 2014ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಆರ್‌ಆರ್‌ಎಸ್‌ಎಸ್ ಕಚೇರಿಗೆ ಹೆಲ್ಮೆಟ್‌ರಹಿತವಾಗಿ ಸ್ಕೂಟರ್‌ನಲ್ಲಿ ಬಂದಿದ್ದ ವಿಚಾರ ವಿವಾದವನ್ನುಂಟು ಮಾಡಿತ್ತು.
,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News