ಬಿಹಾರದಲ್ಲಿ ನಿಗೂಢವಾಗಿ ಹದಿಮೂರು ಮಂದಿ ಸಾವು; ನಕಲಿ ಮದ್ಯ ಸೇವಿಸಿರುವ ಶಂಕೆ

Update: 2016-08-17 06:45 GMT

ಹೊಸದಿಲ್ಲಿ, ಆ.17: ಹದಿಮೂರು ಮಂದಿ ನಿಗೂಢವಾಗಿ ಸಾವನ್ನಪ್ಪಿದ  ಘಟನೆ ಬಿಹಾರದ ಗೋಪಾಲ್‌ಗಂಜ್‌ನಲ್ಲಿ ನಡೆದಿದ್ದು, ನಕಲಿ ಮದ್ಯ ಸೇವಿಸಿರುವುದು ಈ ದುರಂತಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಬಳಕೆ ನಿಷೇಧ ಜಾರಿಯಲ್ಲಿದ್ದು, ಈ ಕಾರಣದಿಂದಾಗಿ   ಹದಿಮೂರು ಮಂದಿಯ ಸಾವಿಗೆ ನಕಲಿ ಮಧ್ಯ ಸೇವಿಸಿರುವುದು ಕಾರಣ ಎಂಬ ಆರೋಪವನ್ನು ಜಿಲ್ಲಾಧಿಕಾರಿ ರಾಹುಲ್ ಕುಮಾರ್‌  ನಿರಾಕರಿಸಿದ್ದಾರೆ.
ಕಳೆದ ಎಪ್ರಿಲ್‌ನಲ್ಲಿ ಮುಖ್ಯ ಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ರಾಜ್ಯ ಸರಕಾರ ರಾಜ್ಯದಲ್ಲಿ ಮದ್ಯ ನಿಷೇಧ ಜಾರಿಗೊಳಿಸಿತ್ತು.
ಮೃತಪಟ್ಟವರು ಮಂಗಳವಾರ ಸಂಜೆ ನಕಲಿ ಮದ್ಯ ಸೇವಿಸಿರುವುದನ್ನು ಅವರ ಕುಟುಂಬದವರು ಒಪ್ಪಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News