ಪೊಲೀಸ್ ದಾಳಿ ವಿರೋಧಿಸಿ ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆ ಅಂತ್ಯ

Update: 2016-08-17 17:57 GMT

ಹೊಸದಿಲ್ಲಿ,ಆ.17: ವಿವಿಯ ಹಾಸ್ಟೆಲ್‌ಗಳಲ್ಲಿ ಪೊಲೀಸರಿಂದ ‘ದಿಢೀರ್ ತಪಾಸಣೆ’ಗಳ ವಿರುದ್ಧ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆಯಲ್ಲಿ ತೊಡಗಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ವಿದ್ಯಾರ್ಥಿಗಳು ಬುಧವಾರ ಕುಲಪತಿಗಳು ಕ್ಯಾಂಪಸ್‌ನಲ್ಲಿ ಪೊಲೀಸರ ಉಪಸ್ಥಿತಿಗೆ ಎಳ್ಳಷ್ಟೂ ಅವಕಾಶ ನೀಡುವುದಿಲ್ಲವೆಂದು ಭರವಸೆ ನೀಡಿದ ಬಳಿಕ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ಕಳೆದ ಶನಿವಾರ ನಡೆದಿದ್ದ ಈ ದಿಢೀರ್ ತಪಾಸಣೆಗಳನ್ನು ‘ದಾಳಿಗಳು’ ಎಂದು ವಿದ್ಯಾರ್ಥಿಗಳು ಬಣ್ಣಿಸಿದ್ದರೆ, ಸ್ವಾತಂತ್ರ ದಿನಾಚರಣೆಗೆ ಮುನ್ನ ವಿವಿ ಪ್ರದೇಶದಲ್ಲಿ ಮಾಮೂಲು ತಪಾಸಣೆಗಳನ್ನು ನಡೆಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಪೊಲೀಸ್ ಸಿಬ್ಬಂದಿ ಯಾವುದೇ ಪರವಾನಿಗೆಯನ್ನು ಪಡೆದುಕೊಳ್ಳದೆ ಮಫ್ತಿಯಲ್ಲಿ ಜಾಮಿಯಾ ಆವರಣವನ್ನು ಪ್ರವೇಶಿಸಿದ್ದನ್ನು ತೀವ್ರವಾಗಿ ಆಕ್ಷೇಪಿಸಿದ್ದ ವಿದ್ಯಾರ್ಥಿಗಳು ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ದಿಲ್ಲಿ ಪೊಲೀಸ್ ಇಲಾಖೆಗೆ ಪತ್ರವನ್ನು ಬರೆದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News