ಮಣಿಪುರ ರಾಜ್ಯಪಾಲರಾಗಿ ನಜ್ಮಾ ಹೆಫ್ತುಲ್ಲಾ ನೇಮಕ

Update: 2016-08-17 17:58 GMT

ಹೊಸದಿಲ್ಲಿ,ಆ.17: ಮಾಜಿ ಕೇಂದ್ರ ಸಚಿವೆ ನಜ್ಮಾ ಹೆಫ್ತುಲ್ಲಾ(76) ಅವರನ್ನು ಮಣಿಪುರ ಮತ್ತು ಮಾಜಿ ರಾಜ್ಯಸಭಾ ಸದಸ್ಯ ವಿ.ಪಿ.ಸಿಂಗ್ ಬದ್ನೋರ್(68) ಅವರನ್ನು ಪಂಜಾಬ್ ರಾಜ್ಯಪಾಲರನ್ನಾಗಿ ಬುಧವಾರ ನೇಮಕಗೊಳಿಸಲಾಗಿದೆ. ನಾಲ್ಕು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ಪ್ರಕಟಿಸಲಾಗಿದ್ದು, ಎಲ್ಲರೂ ಬಿಜೆಪಿ ಯೊಂದಿಗೆ ಗುರುತಿಸಿಕೊಂಡಿರುವವರೇ ಆಗಿದ್ದಾರೆ.

ನಾಗಪುರದಿಂದ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ‘ಹಿತವಾದ’ ದೈನಿಕದ ವ್ಯವಸ್ಥಾಪಕ ಸಂಪಾದಕ ಬನವಾರಿಲಾಲ್ ಪುರೋಹಿತ(76) ಅವರನ್ನು ಅಸ್ಸಾಂ ರಾಜ್ಯಪಾಲರನ್ನಾಗಿ ಮತ್ತು ದಿಲ್ಲಿಯ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಪ್ರೊ.ಜಗದೀಶ ಮುಖಿ(73) ಅವರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಳಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆಯು ತಿಳಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News