ಮಲಪ್ಪುರಂನಲ್ಲಿ ಗಾಂಜಾ ಬೆಳೆಯುತ್ತಿರುವ ಮಕ್ಕಳು!

Update: 2016-08-18 11:30 GMT

ಮಲಪ್ಪುರಂ,ಆಗಸ್ಟ್ 18: ಇಲ್ಲಿಗೆ ಸಮೀಪದ ಮನೆಯೊಂದರ ಮೆಟ್ಟಿಲಿನ ಬಳಿ ಗಾಂಜಾವನ್ನು ಅಪ್ರಾಪ್ತ ವಯಸ್ಸಿನ ಮಕ್ಕಳೇ ಸಣ್ಣ ಚಟ್ಟಿಗಳಲ್ಲಿ ಬೆಳೆಯುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಮೊದಲು ಸುಮ್ಮನೆ ಪುಕ್ಕಟೆ ರುಚಿಗೆ ಇವರಿಗೆ ಲಭಿಸುತ್ತಿತ್ತು. ಅಭ್ಯಾಸವಾದ ನಂತರ ಹಣಕೊಟ್ಟು ಅದನ್ನು ಖರೀದಿಸಬೇಕಿತ್ತು. ಇದು ಈ ಮಕ್ಕಳನ್ನು ಸ್ವಂತ ಗಾಂಜಾಬೆಳೆಯಲು ಪ್ರೇರೇಪಿಸಿದ್ದೆಂದು ವರದಿ ತಿಳಿಸಿದೆ.

ಈಗ ಊರ ಹೊರಗಿನ ಮನೆಯೊಂದರ ಮನೆಯಲ್ಲಿ ಗಾಂಜಾ ಬೆಳೆಯುತ್ತಿದೆ. ತಂದೆತಾಯಿಗೆ ಅದು ಮಕ್ಕಳು ನೆಟ್ಟಿರುವ ಗಿಡ ಯಾವುದೆಂದು ಸಹಾ ಗೊತ್ತಿಲ್ಲ. ಪ್ಲಾಸ್ಟಿಕ್ ಚಟ್ಟಿಯಲ್ಲಿ ಅವರು ಗಾಂಜಾಕೃಷಿಗಿಳಿದಿದ್ದಾರೆ. ತಂದೆತಾಯಿಗೆ ಇದೊಂದು ಗಿಡ ಎಂದು ನಂಬಿಸಿ ಸುಮ್ಮನಾಗಿಸಿದ್ದಾರೆ. ಆಮನೆಯಲ್ಲಿ ಆರು ಪ್ಲಾಸ್ಟಿಕ್ ಚಟ್ಟಿಗಳಲ್ಲಿ ಗಾಂಜಾ ಗಿಡಬೆಳೆಯುತ್ತಿದೆ ಎಂದು ತಿಳಿದು ಬಂದಿದೆ. ಮಲಪುರಂ ಕೇಂದ್ರವಾಗಿಟ್ಟು ಸುತ್ತಲಿನ ಪ್ರದೇಶದಲ್ಲಿ ಗಾಂಜಾಕೃಷಿ ನಡೆಸುವುದು ಮತ್ತು ಮಾರಾಟದ ತಂಡ ಕಾರ್ಯನಿರತವಾಗಿದೆ. ಇವರು ಮಕ್ಕಳನ್ನು ಗಾಂಜಾ ಮಾರಾಟಕ್ಕೆ ಬಳಸುತ್ತಿದ್ದಾರೆ. ಮಕ್ಕಳಿಗೆ ಇವರೇ ಗಾಂಜಾಗಿಡಗಳನ್ನು ತಂದು ಕೊಟ್ಟಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News