60 ವರ್ಷ ವಯಸ್ಸಿನ ಮಹಿಳೆ ಸಹಿತ ಇಬ್ಬರ ಬಂಧನ

Update: 2016-08-19 09:13 GMT

ಭಾಗ್‌ಪತ್,ಆ. 19: 150 ಕೆ.ಜಿ. ಗೋಮಾಂಸವನ್ನು ಇಟ್ಟುಕೊಂಡಿದ್ದಾರೆಂದು ಆರೋಪಿಸಿ 60ವರ್ಷ ವಯಸ್ಸಿನ ಮಹಿಳೆ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರಪ್ರದೇಶದ ಭಾಗ್‌ಪತ್‌ನಿಂದ ವರದಿಯಾಗಿದೆ. ದನವನ್ನು ಕೊಂದಿದ್ದಾರೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಗಾಸ್‌ಪುರ್ ಗ್ರಾಮದಲ್ಲಿ ನಡೆಸಿದ ದಾಳಿಯಲ್ಲಿ ನಾಸಿಂ ಎಂಬವರ ಮನೆಯಿಂದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದ್ದು, 60ವರ್ಷದ ಮಹಿಳೆವಖೀಲಾ, ಈಕೆಯ ನೆರೆಯವನಾದ ತಾಲಿಬ್ ಎಂಬಾತನನ್ನು ಪೊಲೀಸರು ಬಂಧಿಸಿದರು ಎಂದು ವರದಿಯಾಗಿದೆ.

 ಇಬ್ಬರ ವಿರುದ್ಧ ಗೋಹತ್ಯೆ ನಿಷೇಧ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಂಸವನ್ನು ಪಶುವೈದ್ಯರು ಗೋಮಾಂಸ ವಾಗಿರಬಹುದು ಎಂದು ಸಂದೇಹ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅದನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅಪರ ಪೊಲೀಸ್ ಅಧೀಕ್ಷರಾದ ಅಝೀಝುಲ್ ಹಕ್ ಹೇಳಿದ್ದಾರೆ. ಬಜರಂಗದಳ ಮತ್ತು ಇತರ ಹಿಂದುತ್ವವಾದಿ ಸಂಘಟನೆಗಳು ಪ್ರತಿಭಟನೆ ನಡೆಸಿ ದನವನ್ನು ಕೊಂದವರ ವಿರುದ್ಧ ಕೂಡಲೇ ಕ್ರಮ ಜರಗಿಸದಿದ್ದರೆ ಬಲವಾದ ಪ್ರತಿಕ್ರಿಯೆಯನ್ನು ಎದುರಿಸಬೇಕಾದೀತೆಂದು ಪೊಲೀಸರಿಗೆ ಬೆದರಿಕೆ ಹಾಕಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News