ಭಾರತಕ್ಕೆ ಬಲೂಚಿಸ್ತಾನದ ಕುರಿತು ಮಾತಾಡುವ ಹಕ್ಕಿದೆ!: ಅಪ್ಘಾನಿಸ್ತಾನದ ಮಾಜಿ ಅಧ್ಯಕ್ಷ ಕರ್ಝಾಯಿ

Update: 2016-08-20 11:26 GMT

ಹೊಸದಿಲ್ಲಿ,ಆಗಸ್ಟ್ 20: ಬಲೂಚಿಸ್ಥಾನದಲ್ಲಿ ಪಾಕಿಸ್ತಾನದ ಸೇನೆ ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗಳ ವಿರುದ್ಧ ಮಾತಾಡುವ ಹಕ್ಕು ಭಾರತಕ್ಕಿದೆ ಎಂದು ಅಪ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಝಾಯಿ ಹೇಳಿದ್ದಾರೆಂದು ವರದಿಯಾಗಿದೆ.

"ಅಪ್ಘಾನಿಸ್ತಾನದ ವಿರುದ್ಧ ಮತ್ತು ಭಾರತದ ವಿರುದ್ಧ ಪಾಕಿಸ್ತಾನ ನಿರಂತರ ಹೇಳಿಕೆ ನೀಡುತ್ತಿದೆ. ಆದರೆ ಭಾರತದ ಪ್ರಧಾನಿ ಪಾಕಿಸ್ತಾನದ ಕುರಿತು ಮೊದಲ ಸಲ ಹೇಳಿಕೆ ನೀಡಿದ್ದಾರೆ". ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರಮೋದಿಯನ್ನು ಭೇಟಿಯಾದ ಬಳಿಕ ಕರ್ಝಾಯಿ ಹೀಗೆ ಹೇಳಿದ್ದಾರೆಂದು ತಿಳಿದು ಬಂದಿದೆ.

ಶಾಂತಿಯ ವಾತಾವರಣ ನೆಲೆಯೂರಿರುವ ಯಾವುದೇ ಪ್ರದೇಶದಲ್ಲಿ ಭಾರತ ಒಂದು ಛಾಯಯುದ್ಧಕ್ಕೆ ಸಿದ್ಧವಾದೀತೆಂದು ತಾನು ಭಾವಿಸುವುದಿಲ್ಲ. ವಲಯ ಛಾಯಯುದ್ಧದ ತೆಕ್ಕೆಗೆ ಸರಿಯುವುದು ಸರಿಯಲ್ಲ ಎಂದೂ ಕರ್ಝಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ಎಪ್ಪತ್ತನೆ ಸ್ವಾತಂತ್ರ್ಯ ದಿನಾಚರಣೆ ವೇಳೆಪ್ರಧಾನಿ ನರೇಂದ್ರಮೋದಿ ಬಲೂಚಿಸ್ತಾನ್, ಗಿಲ್‌ಗಿತ್, ಪಾಕ್ ಆಕ್ರಮಿತ ಕಾಶ್ಮೀರದ ಜನರು ತನ್ನನ್ನು ಮತ್ತು ಭಾರತದ ಜನರಲ್ಲಿ ನಂಬಿಕೆ ಹೊಂದಿದ್ದಾರೆಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ನಂತರ ವ್ಯಾಪಕ ಚರ್ಚೆಗೀಡಾಗಿತ್ತೆಂದು ವರದಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News