ಎಡಿಬಿಯ ಒಳಚರಂಡಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಗಿತ ಶರಾಬಿ ನದಿಗೆ ಒಳಚರಂಡಿ ನೀರು

Update: 2017-01-31 17:24 GMT

ಸ್ಥಳೀಯರಲ್ಲಿ ಹೆಚ್ಚುತ್ತಿದೆ ವಿವಿಧ ರೋಗ
ಭಟ   ್ಕಳ,ಜ.31: ನಗರದ ಜನನಿಬಿಡ ಪ್ರದೇಶದಲ್ಲಿ ಎಡಿಬಿ ಯೋಜನೆಯಡಿ ನಿರ್ಮಿಸಿರುವ ಒಳಚರಂಡಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಗಿತಗೊಂಡಿದ್ದು, ಊರಿನ ಒಳಚರಂಡಿಯ ಮೂಲಕ    
ಘಟಕ ಸೇರಬೇಕಾಗಿದ್ದು, ಮಲಿನ ತ್ಯಾಜ್ಯವನ್ನು ಶರಾಬಿ ನದಿಗೆ ಬಿಡಲಾಗುತ್ತಿದ್ದು ಇದರಿಂದಾಗಿ ನದಿ ತೀರದ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ.

ಮಲಿನತೆಯಿಂದ ಕಲುಷಿತಗೊಂಡ ಶರಾಬಿ ನದಿಯು ಹಲವು ಅವಾಂತರಗಳಿಗೆ ಕಾರಣವಾಗಿದ್ದು, ಈ ಭಾಗದಲ್ಲಿ ವಾಸಿಸುವ ಜನರನ್ನು ರೋಗಿಷ್ಟರನ್ನಾಗಿ ಮಾಡುತ್ತಿದೆ. ಈ ನದಿಯು ಅರಬ್ಬಿ ಸಮುದ್ರಕ್ಕೆ ಸೇರುತ್ತಿದ್ದು, ತ್ಯಾಜ್ಯ ನೀರು ಸಮುದ್ರ ಸೇರುವುದರ ಮೂಲಕ ಮೀನುಗಾರರಿಗೆ ಹಾಗೂ ಜಲಸಂಕುಲಕ್ಕೆ ಜೀವಾಪಾಯ ತಂದೊಡ್ಡಿದೆ. ಮೀನುಗಾರಿಕೆಗೆ ತೆರಳುವ ಮೀನುಗಾರರಲ್ಲಿ ಈ ಮಲಿನ ನೀರು ಸಮಸ್ಯೆಯನ್ನು ಉಂಟುಮಾಡುತ್ತಿದ್ದು, ಮೀನುಗಾರರು ಸಮುದ್ರದ ನೀರನ್ನು ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ.


 ಮಲಿನ ತ್ಯಾಜ್ಯ ದುರ್ವಾಸನೆ ಬೀರುತ್ತಿದ್ದು, ಗೌಸಿಯಾ ಸ್ಟ್ರೀಟ್, ಫಾರೂಖೀ ಸ್ಟ್ರೀಟ್, ಡಾರಂಟ ಪ್ರದೇಶದ ನಿವಾಸಿಗಳಲ್ಲಿ ಆತಂಕ ವನ್ನು ಸೃಷ್ಟಿಸಿದ್ದು, ಆ ಭಾಗದಲ್ಲಿ ರೋಗ-ರುಜಿನಗಳು ಹೆಚ್ಚಾ        
ತೊಡಗಿವೆ. ತ್ಯಾಜ್ಯವನ್ನು ಪರಿಷ್ಕರಣೆ ಮಾಡುವ ಯಂತ್ರಗಳು ಹಲವಾರು ಬಾರಿ ಕೆಟ್ಟು ಹೋಗುತ್ತಿದ್ದರೂ ಪುರಸ1ಭೆಯ ಅಧಿಕಾರಿಗಳು ಹಾಗೂ ಸದಸ್ಯರು ಯಾವುದೇ ಕ್ರಮ ಜರಗಿಸದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ತಮ್ಮತಮ್ಮ ಮನೆಗಳನ್ನು ಬಿಟ್ಟು ದೂರದ ಪ್ರದೇಶಕ್ಕೆ ತೆರಳುವ ಯೋಜನೆಯನ್ನು ರೂಪಿಸಿರುವ ಅಲ್ಲಿನ ನಿವಾಸಿಗಳು ನಮಗೆ ಆರೋಗ್ಯಯುತವಾಗಿ ಬದುಕುವ ವ್ಯವಸ್ಥೆ ಮಾಡಿಕೊಡಬೇಕೆಂದು ಸರಕಾರ ಹಾಗೂ ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದಾರೆ. ಜನವಸತಿ ಪ್ರದೇಶದಲ್ಲಿ ಇಂತಹ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿದ್ದು ಅವೈಜ್ಞಾನಿಕ ಕ್ರಮವಾಗಿದ್ದು ಜನರ ಆರೋಗ್ಯವನ್ನು ಹಾಳು ಮಾಡುವ ಷಡ್ಯಂತ್ರ ಇದಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಕೂಡಲೇ ಈ ಸಂಸ್ಕರಣಾ ಘಟಕವನ್ನು ಸ್ಥಳಾಂತರಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ಈ ಭಾಗದ ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಇಲ್ಲಿನ ಸಾಮಾಜಿಕ ಸಂಸ್ಥೆ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸೋಮವಾರ ಸಹಾಯಕ ಆಯುಕ್ತ ಮಂಜುನಾಥ್ ಅವರನ್ನು ಭೇಟಿಯಾಗಿ ಕೂಡಲೇ ತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆಯನ್ನು ಬಗೆಹರಿಸಿ ಕೊಡುವಂತೆ ಒತ್ತಾಯಿಸಿದೆ ಎಂದು ತಿಳಿದು ಬಂದಿದೆ.

ಸಮಸ್ಯೆಯ ಗಂಭೀರತೆಯನ್ನು ಸಚಿವರಿಗೆ ಮನದಟ್ಟು ಮಾಡಿಕೊಡಲಾಗಿದೆ. ಈ ಕುರಿತು ಸಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ ಸಚಿವ ರೋಶನ್ ಬೇಗ್, ಫೆ.4ರಂದು ಭಟ್ಕಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರಗಿಸುವ ಕುರಿತು ಭರವಸೆ ನೀಡಿದ್ದಾರೆ.
ಮುಝಮ್ಮಿಲ್ ಕಾಝಿಯಾ ತಂಝೀಮ್ ಸಂಸ್ಥೆಯ ಅಧ್ಯಕ್ಷ

Writer - ಎಂ.ಆರ್.ಮಾನ್ವಿ

contributor

Editor - ಎಂ.ಆರ್.ಮಾನ್ವಿ

contributor

Similar News