ಕ್ಯೂನಲ್ಲಿ ಮೂತ್ರಪಿಂಡ ರೋಗಿಗಳ ನರಳಾಟ: ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ತಪ್ಪದು ಪರದಾಟ
ಚಿಕ್ಕಮಗಳೂರು, ಜೂ.10: ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸೀಸ್ ಯಂತ್ರಗಳ ಕೊರತೆಯಿಂದ ಕಿಡ್ನಿ ತೊಂದರೆಯುಳ್ಳ ರೋಗಿಗಳಿಗೆ ತೀವ್ರ ತೊಂದರೆ ಎದುರಾಗಿದೆ.
ಇಲ್ಲಿ ಕಿಡ್ನಿ ಸಮಸ್ಯೆಯುಳ್ಳವರು ಡಯಾಲಿಸೀಸ್‌ಗೆ ಬಂದರೆ ಒಬ್ಬರಿಗೆ ಚಿಕಿತ್ಸೆ ನಿಲ್ಲಿಸಿದರೆ ಮಾತ್ರ ಮತ್ತೊಬ್ಬರಿಗೆ ಅವಕಾಶ ಸಿಗುತ್ತದೆ. ಇದರಿಂದ ಅನೇಕರು ಸಾಲಿನಲ್ಲೇ ಕಾಯಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿ ಎದುರಾಗಿದೆ.
ಮೂತ್ರ ಪಿಂಡ ತೊಂದರೆ ಕಾಣಿಸಿಕೊಳ್ಳುವುದಕ್ಕೆ ಬಡವ-ಬಲ್ಲಿದ ಎನ್ನುವ ಭೇಧ-ಭಾವ ಇಲ್ಲ. ಮೂತ್ರಪಿಂಡದ ಖಾಯಿಲೆ ಬಂದವರು ಮಾತ್ರ ಡಯಾಲಿಸೀಸ್ ಯಂತ್ರಗಳ ಕೊರತೆಯಿಂದ ತಾವು ಹುಟ್ಟಿದೇ ತಪ್ಪಾ ಅನ್ನುವಂತಾ ಭಾವನೆಯಿಂದ ಸಂಕಟಪಡುತ್ತಿದ್ದಾರೆ. ಸರಕಾರದ ಡಯಾಲಿಸಿಸ್ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸೀಸ್ ಮಾಡಿಸಿಕೊಳ್ಳುವ 43 ಮಂದಿ ರೋಗಿಗಳಲ್ಲಿ ಯಾರದರೂ ಒಬ್ಬರಿಗೆ ಚಿಕಿತ್ಸೆ ನಿಲ್ಲಿಸಿದರೆ ಮಾತ್ರ ಇನ್ನೋಬ್ಬರಿಗೆ ಅವಕಾಶ ಸಿಗುತ್ತದೆ. ಜೇಬಲ್ಲಿ ಕಾಸಿಟ್ಟಿಕೊಂಡಿರುವವರು ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಕಾಫಿನಾಡಿನ ಜನರಿಗೆ ಬಂದೊದಗಿರುವುದು ವಿಪರ್ಯಾಸವೇ ಸರಿ.
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಬರುವ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ದೇವರನ್ನು ನೆನಸಿಕೊಂಡು ಬದುಕಿದೇ ಅನ್ನುವ ಅಸೆಯಿಂದ ಒಳಕ್ಕೆ ಹೋದರೆ ಅಲ್ಲಿನ ವಾಸ್ತವ ಪರಿಸ್ಥಿತಿ ಕಂಡು ಭೀತಿಗೊಳ್ಳದಿರಲಾರರು.ಒಳಹೊಕ್ಕ ನಂತರ ಅಲ್ಲಿನ ನೈಜ ಸ್ಥಿತಿ ಒಂದೊಂದಾಗಿ ತಮ್ಮ ಅರಿವಿಗೆ ಬರುತ್ತದೆ. ಈ ಆಸ್ಪತ್ರೆಯಲ್ಲಿ ಕೇವಲ 7ಡಯಾಲಿಸಿಸ್ ಯಂತ್ರಗಳು ಮಾತ್ರ ಇವೆ. ಅದರಲ್ಲಿ 2 ಯಂತ್ರಗಳು ಕೆಟ್ಟು ಹೋಗಿವೆ. ಹೀಗಾಗಿ ಜಿಲ್ಲೆಯ ವಿವಿಧ ಬಾಗಗಳ ಸುಮಾರು 43ಕ್ಕೂ ಅಧಿಕ ರೋಗಿಗಳು ಕ್ಯೂನಲ್ಲಿಕಾದಿದ್ದಾರೆ.
ಈಗ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಯಾರಾದರೂ ಮೃತರಾದರೆಮಾತ್ರ ಮತ್ತೊಬ್ಬರಿಗೆ ಅವಕಾಶಲಭಿಸುತ್ತದೆ. ಹೀಗೆ ಸಮಸ್ಯೆಯ ಆಗರದಲ್ಲಿರುವ ಜಿಲ್ಲಾಸ್ಪತ್ರೆಯಿಂದ ಬೇತ್ತ ರೋಗಿಗಳು ಪಕ್ಕದ ಶಿವಮೊಗ್ಗ, ಮಂಗಳೂರು, ಹಾಸನ, ಬೆಂಗಳೂರು ಜಿಲ್ಲೆಗಳ ಖಾಸಗಿಆಸ್ಪತ್ರೆಗಳಿಗೆ ತೆರಳಿ ಡಯಾಲಿಸಿಸ್ ಮಾಡಿುವಂತಾ ಪರಸ್ಥಿತಿ ನಿರ್ಮಾಣವಾಗಿದೆ.