ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಎಲ್‌.ಎನ್. ಶಾಸ್ತ್ರಿ ವಿಧಿವಶ

Update: 2017-08-30 17:25 IST
ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಎಲ್‌.ಎನ್. ಶಾಸ್ತ್ರಿ ವಿಧಿವಶ
  • whatsapp icon

ಬೆಂಗಳೂರು, ಆ.30: ಕನ್ನಡ ಚಲನಚಿತ್ರ ರಂಗದ ಖ್ಯಾತ ಹಿನ್ನೆಲೆ ಗಾಯಕ ಹಾಗೂ ಸಂಗೀತ ನಿರ್ದೇಶಕ ಎಲ್‌ಎನ್ ಶಾಸ್ತ್ರಿ(46 ವರ್ಷ) ಬುಧವಾರ ದೀರ್ಘಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಶಾಸ್ತ್ರಿ ಕಳೆದ ಕೆಲವು ಸಮಯದಿಂದ ಕರುಳ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಹಿನ್ನೆಲೆ ಗಾಯಕರಾಗಿ 3000ಕ್ಕೂ ಚಿತ್ರಗಳಲ್ಲಿ ಹಾಡಿದ್ದ ಶಾಸ್ತ್ರಿ ಜನುಮದ ಜೋಡಿ, ಶ್ಶ್, ಎ, ಜೋಡಿ ಹಕ್ಕಿ, ಸಿಪಾಯಿ ಹಾಗೂ ಮಲ್ಲ ಸಹಿತ ಹಲವು ಚಿತ್ರಗಳ ಹಾಡುಗಳಿಂದ ಜನಜನಿತರಾಗಿದ್ದರು. ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ವಿ.ಮನೋಹರ್ ಹಾಗೂ ರವಿಕಿರಣ್‌ರೊಂದಿಗೆ ಕೆಲಸ ಮಾಡಿದ್ದರು. 25ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದರು.

ಶಾಸ್ತ್ರಿ ಮಕ್ಕಳು ಹಾಗೂ ಗಾಯಕಿ, ಪತ್ನಿ ಸುಮಿತ್ರಾರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News